BollywoodCinemaLatestMain PostNational

ಗೋವಾದಲ್ಲಿ ಮೌನಿರಾಯ್ ಬ್ಯಾಚುಲರ್ ಪಾರ್ಟಿ

ಪಣಜಿ: ಬಾಲಿವುಟ್ ನಟಿ ಮೌನಿ ರಾಯ್ ಅವರು ಸ್ನೇಹಿತೆಯರ ಜೊತೆಗೆ ಗೋವಾದಲ್ಲಿ ಬ್ಯಾಚುಲರ್ ಪಾರ್ಟಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

ಬಾಲಿವುಡ್‍ನ ಸ್ಟೈಲಿಷ್ ನಟಿ ಮೌನಿ ರಾಯ್ ತನ್ನ ದೀರ್ಘಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗುತ್ತಿದ್ದಾರೆ. ಮೌನಿ ರಾಯ್ ನವವಧುವಾಗಿ ಮಿಂಚಲಿದ್ದಾರೆ,  ಜನವರಿ 2022ರಲ್ಲಿ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

ಮೌನಿ ರಾಯ್ ಸ್ನೇಹಿತೆ ಆಶ್ಕಾ ಗೊರಾಡಿಯಾ ಅವರು ಹಂಚಿಕೊಂಡ ಇತ್ತೀಚಿನ ಫೋಟೋಗಳ ಪ್ರಕಾರ, ಮೌನಿ ರಾಯ್ ಗೋವಾದಲ್ಲಿ ತಮ್ಮ ಬ್ಯಾಚುರಲರ್ ಪಾರ್ಟಿಯನ್ನು ಎಂಜಾಯ್ ಮಾಡಿದ್ದಾರೆ. ಮೌನಿ ರಾಯ್ ಹಲವಾರು ವರ್ಷಗಳಿಂದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ನಟಿ ಈ ಹಿಂದೆ ದುಬೈನಲ್ಲಿ ಮದುವೆಯಾಗಲು ಯೋಜಿಸಿದ್ದರು.

 

View this post on Instagram

 

A post shared by mon (@imouniroy)

ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾರತದಲ್ಲಿ ತಮ್ಮ ಮದುವೆ ದಿನ ಸಂಭ್ರಮಿಸಲು ನಿರ್ಧರಿಸಿದ್ದಾರೆ. ಜನವರಿ 26 ರಂದು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿದ್ದು, ಜನವರಿ 27 ರಂದು ಮದುವೆ ನಡೆಯಲಿದೆ. ನಟಿ ಆಶ್ಕಾ ಗೊರಾಡಿಯಾ ಹಂಚಿಕೊಂಡ ಫೋಟೋಗಳಲ್ಲಿ ಅವರು ಮೌನಿ ರಾಯ್ ಅವರೊಂದಿಗೆ ಪಾರ್ಟಿ ಮಾಡುತ್ತಿದ್ದಾರೆ. ಒಂದು ಫೋಟೋದಲ್ಲಿ ಮೌನಿ ತನ್ನ ಸ್ನೇಹಿತೆಯರ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by mon (@imouniroy)

ಮೌನಿ ರಾಯ್ ಪ್ರಸ್ತುತ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೂಚ್ ಬಿಹಾರದಲ್ಲಿ ಆರತಕ್ಷತೆ ಇರುತ್ತದೆ ಎಂದು ಅವರು ಹೇಳಿದ್ದರು. ರಾಯ್ಸಾರ್ಕರ್ ಅವರು ಮತ್ತು ಅವರ ಕುಟುಂಬವು ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published.

Back to top button