ಮಲೇಷ್ಯಾ: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.
Advertisement
Advertisement
ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.
Advertisement
Advertisement
ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.
ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.
ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.