ವಿಜಯಪುರ: ಕೃಷಿ ಹೊಂಡದಲ್ಲಿ (Farm Pond) ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ ಘಟನೆ ದೇವರಹಿಪ್ಪರಗಿ (Devara Hipparagi) ತಾಲೂಕಿನ ಹರನಾಳ ಗ್ರಾಮದಲ್ಲಿ ಘಟನೆ ನಡೆದಿದೆ.
ಗೀತಾ ಬಡಗಿ (28) ಇಬ್ಬರು ಗಂಡು ಮಕ್ಕಳಾದ ಶ್ರವಣ (6) ಶರಣ (4) ಸಾವನ್ನಪ್ಪಿದ್ದಾರೆ. ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿ ಅವರ ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ಮಕ್ಕಳೊಂದಿಗೆ ತೆರಳಿದ್ದಾಗ ಮಕ್ಕಳೊಂದಿಗೆ ಕಾಲು ಜಾರಿ ಗೀತಾ ಬಿದ್ದಿದ್ದಾರೆ. ಆಗ ಮಕ್ಕಳ ಗೀತಾ ಜೊತೆ ಹೊಂಡಕ್ಕೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ
Advertisement
Advertisement
ಗಂಡನ ಜೊತೆಗೆ ಜಗಳವಾಡಿ ತವರಿಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ಮೂವರ ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement