ಬೆಂಗಳೂರು: ತಾಯಿಯಿಂದಲೇ ಅವಳಿ ಹೆಣ್ಣುಮಕ್ಕಳ (Crime) ಕಗ್ಗೊಲೆಯಾಗಿರುವ ಘಟನೆ ಬೆಂಗಳೂರಿನ(Bengaluru) ತಲಘಟ್ಟಪುರದಲ್ಲಿ ನಡೆದಿದೆ.
ಉಮಾದೇವಿ ಎಂಬಾಕೆಯಿಂದ ಈ ಕೃತ್ಯ ನಡೆದಿದೆ. ಖಾಸಗಿತನಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ತನ್ನ ಎರಡು ಅವಳಿ ಹೆಣ್ಣುಮಕ್ಕಳನ್ನು ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 40 ವರ್ಷಗಳ ಬಳಿಕ ಮಹಿಳೆಗೆ ಐವಿಎಫ್ ಮೂಲಕ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಕಳೆದ ಮೇ ತಿಂಗಳಲ್ಲಿ ಮಹಿಳೆ ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ಓವರ್‌ಟೇಕ್ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ರು; ದುನಿಯಾ ವಿಜಯ್ ಪುತ್ರನ ವಿರುದ್ಧ ಗಾಯಾಳು ಮನೀಷ್ ಆರೋಪ
ಮಕ್ಕಳನ್ನು ಕೊಲೆ ಮಾಡಿದ ಬಳಿಕ ಮಹಿಳೆ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಗ್ಯಾಂಗ್‌ರೇಪ್ ಬೆನ್ನಲ್ಲೇ ದೆಹಲಿಯಲ್ಲಿ ಬಸ್‌ಗಳಿಗೆ ಹೊಸ ರೂಲ್ಸ್ – ಪ್ಯಾನಿಕ್ ಬಟನ್ ಕಡ್ಡಾಯ, ಕಿಟಕಿಗಳಿಗೆ ಪರದೆ ಹಾಕಂಗಿಲ್ಲ
