ಚಿಕ್ಕಮಗಳೂರು: ಸಾಮಾನ್ಯವಾಗಿ ಒಳ್ಳೆ ವಿದ್ಯೆ, ಬುದ್ಧಿ, ಆರೋಗ್ಯ ಕೊಡು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು (Demand) ಭಕ್ತರು (Devotees) ದೇವರ ಮುಂದೆ ಇಡುತ್ತಾರೆ. ಆದರೆ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು ಎಂಬ ವಿಚಿತ್ರ ಕೋರಿಕೆಯನ್ನು ಭಕ್ತರೊಬ್ಬರು ದೇವರ ಮುಂದೆ ಇಟ್ಟಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಕಳಸ (Kalasa) ತಾಲೂಕಿನಲ್ಲಿ ನಡೆದಿದೆ.
ಕೇಳಲು ಆಶ್ಚರ್ಯವಾಗಿದ್ದರೂ ಇದು ನಿಜ. ಭಕ್ತರೊಬ್ಬರು ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಈ ರೀತಿಯಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾನೆ. ಗಿರಿಜಾದೇವಿಗೆ ಭಕ್ತರೊಬ್ಬರು ಪತ್ರ (Letter) ಬರೆದಿದ್ದು, ಭಕ್ತರ ವಿಚಿತ್ರ ಬೇಡಿಕೆಯನ್ನು ಓದಿದ ಹುಂಡಿ ಎಣಿಕೆ ಅಧಿಕಾರಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದನ್ನೂ ಓದಿ: Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ
ಪತ್ರದಲ್ಲಿ ಏನಿದೆ?
ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಜಗತ್ತಿನಲ್ಲೇ ಸುಂದರ ಎಂಬ ಖ್ಯಾತಿ ಗಳಿಸಬೇಕು. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು. ಸರ್ವ ಸುಂದರಿಯಾದ ಗಿರಿಜಾ ದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನು ಈಡೇರಿಸು ತಾಯಿ ಎಂದು ಪತ್ರದಲ್ಲಿ ಬರೆದು ಕಾಣಿಕೆ ಹುಂಡಿಯಲ್ಲಿ ಭಕ್ತ ಹಾಕಿದ್ದಾನೆ. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ
Web Stories