ಬೆಂಗಳೂರು: ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ.
ತಾಯಿ ಮೀನಾ ಆತ್ಮಹತ್ಯೆಗೆ ಶರಣಾದ ತಾಯಿ. ಈಕೆ ಶನಿವಾರ ಬೆಳಗ್ಗೆ ಏಕಾಏಕಿ ತನ್ನಿಬ್ಬರು ಮಕ್ಕಳಾದ ಚರಣ್(6) ಹಾಗೂ ಸುಗುಣ (3)ಗೆ ವಿಷ ಕುಡಿಸಿದ್ದಾರೆ. ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಮೃತ ಮೀನಾ ಕಳೆದ 7 ವರ್ಷಗಳ ಹಿಂದೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕುಮಾರೇಶ್ ಅನ್ನೋರನ್ನು ಮದುವೆಯಾಗಿದ್ದರು. ಮೂಲತಃ ತಮಿಳುನಾಡಿನವರಾದ ಇವರು, ನಗರದ ಹೊರಮಾವು ಬಳಿಯ ಜಯಂತಿನಗರದಲ್ಲಿ ವಾಸವಾಗಿದ್ದರು. ಮದುವೆಯಾದಾಗಿನಿಂದ ಇಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅಲ್ಲದೆ ಇಬ್ಬರ ಮಧ್ಯೆ ಮನಸ್ತಾಪವಿತ್ತು. ಅದು ಬಿಟ್ಟರೆ ಇಬ್ಬರ ಸಂಸಾರ ಸುಖಕರವಾಗಿತ್ತು. ಆದರೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗದ ಶಾಕ್ ಕೊಟ್ಟು ಇಹಲೋಕ ತ್ಯಜಿಸಿದ್ದಾರೆ ಎಂದು ಡಿಸಿಪಿ ಪೂರ್ವ ವಿಭಾಗ ರಾಹುಲ್‍ಕುಮಾರ್ ಶಹಪುರವಾಡ್ ತಿಳಿಸಿದ್ದಾರೆ.
Advertisement
Advertisement
ಈ ಘಟನೆಯಲ್ಲಿ ಮೀನಾಳ ಮಗ ಚರಣ್ ಬದುಕುಳಿದಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಈಗಾಗಲೇ ಮೃತ ಮೀನಾ ಪತಿ ಕುಮಾರೇಶ್‍ನನ್ನು ವಶಕ್ಕೆ ಪಡೆಸು ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಅಸಲಿ ಕಾರಣ ತಿಳಿದುಬಂದಿಲ್ಲ.
Advertisement
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.