ಚಾಮರಾಜನಗರ: ಹೆತ್ತ ಮಗನೇ (Son) ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕಿರುವ ಪ್ರಕರಣದ ಅರ್ಜಿ ವಿಚಾರಣೆಗೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಾಯಿಯನ್ನು (Mother) ಮಂಚದ ಮೇಲೆ ಮಲಗಿಸಿಕೊಂಡು ಉಪವಿಭಾಗಾಧಿಕಾರಿ ಕೋರ್ಟ್‍ಗೆ ಕರೆತರಲಾಯಿತು.
ಚಾಮರಾಜನಗರ (Chamarajanagar) ಪಟ್ಟಣದ ನಿವಾಸಿ ಮುಮ್ತಾಜ್ ಬೇಗಂ(75) ಹಾಸಿಗೆ ಹಿಡಿದ ವೃದ್ಧೆ. ಮುಮ್ತಾಜ್ ಪತಿ ದಿ.ನಿಸಾರ್ ಅಹ್ಮದ್ ಈಕೆಯ ಹೆಸರಿಗೆ ಸರ್ವೆ ನಂ-282ರಲ್ಲಿ ವಿಸ್ತೀರ್ಣ 3.28 ಎಕರೆ ಜಮೀನನ್ನು ಬರೆದ್ದರಂತೆ. ಆದರೆ ಇದನ್ನು ಕೊನೆಯ ಮಗ ಅಬ್ದುಲ್ ರಜಾಕ್ ಹಜ್ ಯಾತ್ರೆಗೆ ಪಾಸ್‍ಪೋರ್ಟ್ ಮಾಡಿಸಿಕೊಡುತ್ತೇನೆ ಎಂದು ಸುಳ್ಳು ಹೇಳಿ ಅವನ ಹೆಸರಿಗೆ ಬರೆಸಿಕೊಂಡಿದ್ದ ಎಂಬ ಆರೋಪ ಕೇಳಿ ಬರುತ್ತಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ನೊಂದ ವೃದ್ಧೆ ತನ್ನ ಕೊನೆಯ ಮಗ ಸಿ.ಎನ್. ಅಬ್ದುಲ್ ರಜಾಕ್ ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-2007 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿನಿಂದ ಮುಮ್ತಾಜ್ ಬೇಗಂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಹೀಗಾಗಿ ಮಗಳ ನೆರವು ಪಡೆದು ಮುಮ್ತಾಜ್ ಬೇಗಂ ಅನ್ನು ಮಂಚದ ಮೇಲೆ ಮಲಗಿಸಿಕೊಂಡೇ ಕೋರ್ಟ್‍ಗೆ ಕರೆತಂದರು. ಇದನ್ನೂ ಓದಿ: ಬಿಎಸ್‌ವೈ, ವಿಜಯೇಂದ್ರ, ಶ್ರೀನಿವಾಸ್ ಪ್ರಸಾದ್ ನನಗೆ ಹಣ ಕೊಡಲು ಬಂದಿದ್ರು – ಹೆಚ್.ವಿಶ್ವನಾಥ್ ಹೊಸ ಬಾಂಬ್
Advertisement
Advertisement
ವೃದ್ಧೆ ಮುಮ್ತಾಜ್ ಅವರನ್ನು ಮಂಚದ ಮೇಲೆ ಕರೆತಂದಿದ್ದನ್ನು ನೋಡಿದ ಉಪವಿಭಾಗಾಧಿಕಾರಿ ಗೀತಾ ಹುಡೇದ ಅವರು ಮುಮ್ತಾಜ್ ಅವರ ವಿಚಾರಣೆ ನಡೆಸದೆ ವಾಪಸ್ ಕಳುಹಿಸಿದ್ದಾರೆ. ಇನ್ನೂ ಮುಮ್ತಾಜ್ ಬೇಗಂಗೆ 3 ಹೆಣ್ಣು ಮತ್ತು 6 ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಕತ್ತು ಕೊಯ್ದ ಸ್ಥಿತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಶವ ಪತ್ತೆ