Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇನ್ಮುಂದೆ ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ – ಕೇಂದ್ರದಿಂದ ಹೊಸ ಮಾರ್ಗಸೂಚಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇನ್ಮುಂದೆ ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ – ಕೇಂದ್ರದಿಂದ ಹೊಸ ಮಾರ್ಗಸೂಚಿ

Latest

ಇನ್ಮುಂದೆ ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ – ಕೇಂದ್ರದಿಂದ ಹೊಸ ಮಾರ್ಗಸೂಚಿ

Public TV
Last updated: February 11, 2026 11:19 am
Public TV
Share
2 Min Read
Vande Mataram
SHARE

– 1937 ರಲ್ಲಿ ತೆಗೆದುಹಾಕಿದ್ದ 4 ಚರಣಗಳೂ ಸೇರ್ಪಡೆ

ನವದೆಹಲಿ: ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ (Vande Mataram) ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರಗೀತೆಗೂ ಮುನ್ನ ʻವಂದೇ ಮಾತರಂʼ ಗೀತೆಯನ್ನ ಹಾಡಬೇಕು ಅಥವಾ ನುಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ (Center New Guidelines) ತಿಳಿಸಿದೆ.

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದರ ಪ್ರಯುಕ್ತ ಗೌರವ ಸಲ್ಲಿಸಲು ಕೇಂದ್ರ ಸರ್ಕಾರ (Central Government) ಈ ನಿರ್ಧಾರ ತೆಗೆದುಕೊಂಡಿದೆ. ಪದ್ಮ ಪ್ರಶಸ್ತಿಗಳಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ರಾಷ್ಟ್ರಪತಿಗಳು ಭಾಗವಹಿಸುವ ಇತರ ಎಲ್ಲಾ ಕಾರ್ಯಕ್ರಮಗಳು, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು, ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸಬೇಕು ಅಥವಾ ಹಾಡಬೇಕು. 3 ನಿಮಿಷ 10 ಸೆಕೆಂಡುಗಳ ಅವಧಿಯ ವಂದೇ ಮಾತರಂ ಗೀತೆಯ 6 ಚರಣಗಳ ಗೀತೆ ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Independence Day

ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ.

ಅಲ್ಲದೇ, ʻರಾಷ್ಟ್ರದ ಗೌರವಕ್ಕೆ ಅಪಮಾನ ತಡೆʼ ಕಾಯ್ದೆ ಅಡಿಯಲ್ಲಿ ರಾಷ್ಟ್ರಗೀತೆಗೆ (ಮತ್ತು ಈಗ ರಾಷ್ಟ್ರೀಯ ಗೀತೆ) ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನ ತಡೆಯುವ ಯಾವುದೇ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

6 ಚರಣಗಳಿರುವ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯ ಈ ನಿರ್ದೇಶನವನ್ನ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ, ವಂದೇ ಮಾತರಂ ಹಾಡಲು ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ಜನ ಗಣ ಮನ ಗೀತೆಯು ರಾಗ, ಸಮಯ ಮತ್ತು ಗಾಯನದ ಬಗ್ಗೆ ಸ್ಪಷ್ಟ ನಿಯಮಗಳನ್ನ ಹೊಂದಿತ್ತು. ಹಾಡಿನ ವಿಸ್ತೃತ, ಆರು-ಚರಣಗಳ ಆವೃತ್ತಿಯನ್ನ ಇಲ್ಲಿಯವರೆಗೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಿರಲಿಲ್ಲ, ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ.

PM Modi 78th Independence Day Red Fort

ವಿಶೇಷವೆಂದ್ರೆ 1937 ರಲ್ಲಿ ಕಾಂಗ್ರೆಸ್‌ ಸರ್ಕಾರ ತೆಗೆದುಹಾಕಿದ್ದ 4 ಚರಣಗಳನ್ನು ಒಳಗೊಂಡಂತೆ ಎಲ್ಲಾ 6 ಚರಣಗಳನ್ನೂ ನುಡಿಸಲಾಗುತ್ತದೆ. 1875 ರಲ್ಲಿ ಅಕ್ಷಯ ನವಮಿಗಾಗಿ ಬಂಕಿಮ್ ಚಂದ್ರ ಚಟರ್ಜಿ ಅವರು ವಂದೇ ಮಾತರಂ ಅನ್ನು ರಚಿಸಿದರು, ಅದು ಆ ವರ್ಷ ನವೆಂಬರ್ 7 ರಂದು ಬಂದಿತು.

TAGGED:Central GovernmentJana Gana ManaOfficial EventsPM Modivande mataramನರೇಂದ್ರ ಮೋದಿರಾಷ್ಟ್ರಗೀತೆವಂದೇ ಮಾತರಂ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Basava Kalyana jatre
Bidar

ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ – ಇಬ್ಬರ ಸ್ಥಿತಿ ಗಂಭೀರ

Public TV
By Public TV
39 seconds ago
public tv vidhyapeeta
Bengaluru City

ʻಪಬ್ಲಿಕ್‌ ಟಿವಿʼ ವಿದ್ಯಾಪೀಠದಲ್ಲಿ ಭಾಗಿಯಾಗಲಿವೆ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು

Public TV
By Public TV
4 minutes ago
Jayanagar Blackmail 2
Bengaluru City

ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

Public TV
By Public TV
19 minutes ago
Thalapathy Vijay 1
Latest

TamilNadu Elections 2026 | ಮತದಾನ ಜೋರು – ಹಕ್ಕು ಚಲಾಯಿಸಿದ ತಲೈವಾ, ದಳಪತಿ, ತ್ರಿಶಾ, ಕಮಲ್ ಹಾಸನ್

Public TV
By Public TV
26 minutes ago
Hassan Rowdysheetar Silent Sunil Hassan
Crime

ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಹಾಸನದಲ್ಲಿ ಭರ್ಜರಿ ಸ್ವಾಗತ – ವೀಡಿಯೋ ವೈರಲ್

Public TV
By Public TV
31 minutes ago
Murshidabad
Latest

West Bengal elections 2026 | ಮತದಾನದ ಹೊತ್ತಲ್ಲೇ ಬಂಗಾಳದಲ್ಲಿ ಕಚ್ಚಾ ಬಾಂಬ್ ದಾಳಿ; ಹಲವರು ಗಂಭೀರ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?