ಗುಜರಾತ್‍ನ ಮೋರ್ಬಿ ದುರಂತ- ಉತ್ತರವಿಲ್ಲದ ಐದು ಪ್ರಶ್ನೆಗಳು

Public TV
2 Min Read
morbi

ಅಹಮದಾಬಾದ್: ಗುಜರಾತ್ ಮೋರ್ಬಿ (Gujrat Morbi) ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ 135 ಮಂದಿ ಸಾವನ್ನಪ್ಪಿದ್ದಾರೆ. ಬಹಳಷ್ಟು ಜನರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಷ್ಟು ಶವಗಳು ನದಿಯ ತಳದಲ್ಲಿ ಸಿಲುಕಿರುವ ಅನುಮಾನಗಳಿದ್ದು, ಅವರ ಹುಡುಕಾಟಕ್ಕೆ NDRF ಪ್ರಯತ್ನ ಮುಂದುವರಿಸಿದೆ.

ಈ ನಡುವೆ ದುರಂತಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಚರ್ಚೆ ನಡೆಗಳು ನಡೆಯುತ್ತಿದೆ. ಇದಕ್ಕಾಗಿ ಗುಜರಾತ್ ಸರ್ಕಾರ ಎಸ್‍ಐಟಿ (SIT) ರಚನೆ ಮಾಡಿದ್ದು, ತನಿಖೆ ಆರಂಭಿಸಿದೆ. ಆದರೆ ಈ ದುರಂತದ ಬಳಿಕ ಐದು ಪ್ರಶ್ನೆಗಳು ಮುನ್ನಲೆಗೆ ಬಂದಿದ್ದು, ಈವರೆಗೂ ಅವುಗಳಿಗೆ ಉತ್ತರ ಸಿಕ್ಕಿಲ್ಲ.

morbi bridge collapse

ಪ್ರಶ್ನೆಗಳು ಇಂತಿವೆ..:
1. ಮೋರ್ಬೀ ತೂಗು ಸೇತುವೆ ಸಾಕಷ್ಟು ಜನಪ್ರಿಯ ಮತ್ತು ಆಕರ್ಷಣೆಯ ಕೇಂದ್ರ. ಇಲ್ಲಿ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ನವೀಕರಣಕ್ಕಾಗಿ ಕಳೆದ ಆರು ತಿಂಗಳಿಂದ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಕಳೆದ ಐದು ದಿನಗಳ ಹಿಂದೆ ಇದನ್ನು ನವೀಕರಣದ ಬಳಿಕ ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು. ಆದರೆ ಈ ಬಗ್ಗೆ ಸ್ಥಳೀಯ ಅಡಳಿತಕ್ಕೆ ಮಾಹಿತಿ ಇಲ್ಲ ಎನ್ನಲಾಗಿದೆ. ಸ್ಥಳೀಯ ಆಡಳಿತದ ಅನುಮತಿ ಇಲ್ಲದೇ, ಸರ್ಟಿಫಿಕೇಟ್ ಇಲ್ಲದೇ ಅವಕಾಶ ನೀಡಿದ್ದೇಗೆ. ಜನರ ಪ್ರದೇಶದ ಬಳಿಕವೂ ಸ್ಥಳೀಯ ಆಡಳಿತ ಮಧ್ಯಪ್ರವೇಶ ಮಾಡದೆ ಸುಮ್ಮನಿದ್ದಿದ್ಯಾಕೆ..?

2. 143 ವರ್ಷಗಳಷ್ಟು ಹಳೆಯದಾದ ಸೇತುವೆಯನ್ನು ಏಕಕಾಲದಲ್ಲಿ 125 ಪ್ರವಾಸಿಗರಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಥಳೀಯ ಪುರಸಭೆಯ ಅಧಿಕಾರಿಗಳು ಹೇಳುತ್ತಾರೆ. ಸೇತುವೆಯ ಮೇಲೆ ಅಂದಾಜು 450 ಪ್ರವಾಸಿಗರಿಗೆ ಹೇಗೆ ಅನುಮತಿಸಲಾಯಿತು.

morbi 3

3. ಮೋರ್ಬಿ ಪುರಸಭೆ ಮತ್ತು ಓರೆವಾ ಗ್ರೂಪ್‍ನ ಮಾರ್ಚ್ 2022 ರ ಒಪ್ಪಂದ ಪ್ರಕಾರ ಸೇತುವೆಯನ್ನು ದುರಸ್ತಿಗಾಗಿ 8 ರಿಂದ 12 ತಿಂಗಳವರೆಗೆ ಮುಚ್ಚಲಾಗುವುದು ಎಂದು ಅಂದಾಜಿಸಲಾಗಿತ್ತು. ಏಳನೇ ತಿಂಗಳಲ್ಲಿ ಸೇತುವೆಯನ್ನು ಸಾರ್ವಜನಿಕರಿಗೆ ತೆರೆದಾಗ ಅದರ ಸಾಮಥ್ರ್ಯ ಮತ್ತು ಸುರಕ್ಷತಾ ಪ್ರಮಾಣೀಕರಣಗಳನ್ನು ಯಾರು ಪರಿಶೀಲಿಸಿದರು?

4. ಗುತ್ತಿಗೆ ಏಜೆನ್ಸಿ ಒರೆವಾ ಗ್ರೂಪ್ ನಿಗದಿತ ಸಂಖ್ಯೆ ಮೀರಿ ಟಿಕೆಟ್‍ಗಳನ್ನು ನೀಡಿದ್ದೇಗೆ? ಸೇತುವೆಯ ಮೇಲಿನ ಜನರ ಲೆಕ್ಕ ಹಾಕದೇ ಎಲ್ಲರಿಗೂ ಪ್ರವೇಶಕ್ಕೆ ಪುರಸಭೆಯ ಸಿಬ್ಬಂದಿ ಅವಕಾಶ ನೀಡಿದ್ದೇಗೆ, ಇದಕ್ಕೆ ಯಾಕೆ ಆಕ್ಷೇಪ ವ್ಯಕ್ತಪಡಿಸಿಲ್ಲ?

morbi 1

5. ಸೇತುವೆಯ ನಿರ್ವಹಣೆಯನ್ನು ಖಾಸಗಿ ಎಂಜಿನಿಯರಿಂಗ್ ಸಂಸ್ಥೆಗೆ ಉಪ ಗುತ್ತಿಗೆ ನೀಡಲಾಗಿದೆ. ಅಧಿಕಾರಿಗಳು ಉಪಗುತ್ತಿಗೆದಾರರ ರುಜುವಾತುಗಳನ್ನು ಪರಿಶೀಲಿಸಿದ್ದಾರೆಯೇ?.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *