ಉತ್ತರ ಕರ್ನಾಟಕ ಅಥವಾ ದಕ್ಷಿಣ ಮಹಾರಾಷ್ಟ್ರ ಪಾಕವಿಧಾನ ಇದಾಗಿದೆ. ಜೋಳದ ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಲಾಗುತ್ತದೆ. ಈ ಪಲ್ಯ ಡ್ರೈ ಅಗಿ ತಯಾರಿಸಲಾಗುತ್ತದೆ. ಆದರೆ ಗ್ರೇವಿ ಆವೃತ್ತಿಯೊಂದಿಗೆ ಸಹ ತಯಾರಿಸಲ್ಪಡುತ್ತದೆ.
ಬೇಕಾಗುವ ಸಾಮಗ್ರಿಗಳು:
* ಅಡುಗೆ ಎಣ್ಣೆ- ಅರ್ಧ ಕಪ್
* ಸಾಸಿವೆ- 1 ಚಮಚ
* ಜೀರಿಗೆ- 1 ಚಮಚ
* ಕರಿಬೇವು – ಸ್ವಲ್ಪ
* ಬೆಳ್ಳುಳ್ಳಿ – 1
* ಶುಂಠಿ ಪೇಸ್ಟ್- 1 ಚಮಚ
* ಮೆಣಸಿನಕಾಯಿ – 2
* ಈರುಳ್ಳಿ- 1
* ಟೊಮೆಟೋ-1
* ಅರಿಶಿಣ- 1ಚಮಚ
* ಮೆಣಸಿನ ಪುಡಿ- 1ಚಮಚ
* ಬೆಲ್ಲ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಮೊಳಕೆ ಬರಿಸಿದ ಹೆಸರು ಕಾಳು- 2ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
Advertisement
ಮಾಡುವ ವಿಧಾನ:
Advertisement
* ಈಗ ಮೊಳಕೆ ಬರಿಸಿದ ಹೆಸರು ಕಾಳು ತಯಾರಿಸಲು 1 ಕಪ್ ಹೆಸರು ಕಾಳನ್ನು ನೆನೆಸಿಡಿ, ನಂತರ ಬಟ್ಟೆಯಲ್ಲಿ ಕಟ್ಟಿ 24 ಗಂಟೆಗಳ ಕಾಲ ಹಾಗೆಯೇ ಬಿಟ್ಟಿರಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
* ಮೊದಲಿಗೆ ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿ ಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಪ್ರೈ ಮಾಡಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ನಂತರ ಈರುಳ್ಳಿ, ಟೊಮೆಟೋ, ಅರಿಶಿಣ, ಮೆಣಸಿನ ಪುಡಿ, ಬೆಲ್ಲ, ಉಪ್ಪು, ಮೊಳಕೆ ಬರಿಸಿದ ಹೆಸರು ಕಾಳು ಸೇರಿಸಿ ಮಿಶ್ರಣ ಮಾಡಿ. ಇದನ್ನೂ ಓದಿ: ಆರೋಗ್ಯಕರವಾದ ಟೊಮೆಟೋ ಸಲಾಡ್ ಮಾಡಿ ಸವಿಯಿರಿ
* ನಂತರ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿದರೆ ರುಚಿಯಾದ ಪಲ್ಯ ಸವಿಯಲು ಸಿದ್ಧವಾಗುತ್ತದೆ.