
ಮನುಷ್ಯರಂತೆ ಮಂಗವೊಂದು ಚಾಕು ಹರಿತ ಮಾಡುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಾಣಿಗಳು ಮನುಷ್ಯರಂತೆ ವರ್ತಿಸುತ್ತವೆ. ಈ ವರ್ತನೆ ನಮ್ಮಲ್ಲಿ ನಗುವಿನಲೆ ಮೂಡಿಸುವುದು ಸರ್ವೇ ಸಾಮಾನ್ಯ. ಕೋತಿಗಳು ಎಂದಾಕ್ಷಣ ನೆನಪಿಗೆ ಬರುವುದು ಅದರ ಕುಚೇಷ್ಟೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಯುದ್ಧವನ್ನೂ ಗೆಲ್ಲಲಿದೆ: ರಾಜನಾಥ್ ಸಿಂಗ್
ಹೆಚ್ಚಿನ ಜನರು ಕೋತಿಗಳ ಕುಚೇಷ್ಟೆಗೆ ಒಂದೊದು ಸಲ ಹೆದರುತ್ತಾರೆ. ಇನ್ನೊಮ್ಮೆ ಅದೇ ಕುಚೇಷ್ಟೆ ನಗುವರಳಿಸುತ್ತದೆ. ಅದರಲ್ಲೂ ಕೆಲವೊಮ್ಮೆ ಕೋತಿಗಳು ಥೇಟ್ ಮನುಷ್ಯರನ್ನೇ ಅನುಕರಣೆ ಮಾಡಿ ಅಚ್ಚರಿ ಮೂಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Hain tayyar hum…..
हैं तैयार हम…😊@ParveenKaswan @susantananda3 pic.twitter.com/1i8TGWCkkQ
— Rupin Sharma IPS (@rupin1992) December 9, 2021
ಕೋತಿಯೊಂದು ಚಾಕು ಹರಿತ ಮಾಡುವ ವೀಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ನಾವು ಸಿದ್ಧರಿದ್ದೇವೆ ಎಂಬ ಕ್ಯಾಪ್ಶನ್ ಕೊಡುವುದರ ಮೂಲಕ ಈ ವೀಡಿಯೋ ಅನೇಕ ನೆಟ್ಟಿಗರ ಗಮನ ಸೆಳೆದಿದೆ. ವೀಡಿಯೋ ೪,೦೦೦ಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಕಾಮೆಂಟ್‌ಗಳ ಸುರಿಮಳೆ ಹರಿದು ಬಂದಿದೆ. ಕೆಲವರು ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ ಬರೋಬ್ಬರಿ 10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!