ಸ್ಯಾಂಡಲ್ವುಡ್ (Sandalwood) ನಟ ಶಿವರಾಜ್ಕುಮಾರ್ `ವೇದ’ (Vedha) ಸೂಪರ್ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟ ಶಿವಣ್ಣ ಅವರನ್ನ ಮಲಯಾಳಂ (Mollywood) ನಟಿ ಅನಸ್ವರ ರಾಜನ್ (Anaswara Rajan) ಭೇಟಿಯಾಗಿದ್ದಾರೆ. ಇದನ್ನೂ ಓದಿ: ಸ್ಯಾಮ್ ಈಸ್ ಬ್ಯಾಕ್, ಹೊಸ ಫೋಟೋಶೂಟ್ನಲ್ಲಿ ಸಮಂತಾ ಮಿಂಚಿಂಗ್
ಡಾ.ರಾಜ್ ಕುಟುಂಬದ ನಟ ಶಿವಣ್ಣ ಅವರಿಗೆ ಕನ್ನಡ ಚಿತ್ರರಂಗದ ಕಲಾವಿದರ ಜೊತೆ ಮಾತ್ರವಲ್ಲ ಪರಭಾಷೆಯ ಸ್ಟಾರ್ಗಳ ಜೊತೆ ಕೂಡ ಉತ್ತಮ ಒಡನಾಟವಿದೆ. ಸಿನಿಮಾ ಬಿಟ್ಟು ಇತರರೊಡನೆ ಬೆರೆಯುವ ಗುಣವಿದೆ. ಇದೀಗ ಮಾಲಿವುಡ್ ನಟಿ ಜೊತೆಗಿನ ಫೋಟೋ ವಿಷ್ಯವಾಗಿ ಶಿವಣ್ಣ ಸುದ್ದಿಯಲ್ಲಿದ್ದಾರೆ.
ನಟಿ ಅನಸ್ವರ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿಗೆ ಬಂದಿರುವ ನಟಿ ಅನಸ್ವರ ಶಿವರಾಜ್ಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಒಂದಿಷ್ಟು ಸಮಯ ಸಿನಿಮಾ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಇವರಿಬ್ಬರ ಭೇಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
View this post on Instagram
ಈ ಫೋಟೋ ವೈರಲ್ ಆಗ್ತಿದ್ದಂತೆ ಶಿವಣ್ಣ (Shivanna) ಅವರ ಮುಂಬರುವ ಸಿನಿಮಾದಲ್ಲಿ ಅನಸ್ವರ ರಾಜನ್ ನಟಿಸುತ್ತಿದ್ದಾರಾ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಸೌತ್ ನಟಿ ಕನ್ನಡದ ಸಿನಿಮಾದಲ್ಲಿ ನಟಿಸುತ್ತಾರಾ ಅಥವಾ ಇದು ಕೇವಲ ಭೇಟಿಯಷ್ಟೇನಾ? ಎಂಬುದನ್ನ ಕಾದುನೋಡಬೇಕಿದೆ.