ನಟ ಮೋಹನ್‌ಲಾಲ್ (Actor Mohanlal) ನಟಿಸಿರುವ ದೃಶ್ಯಂ ಸಿನಿಮಾದ ಜಾರ್ಜ್‌ಕುಟ್ಟಿ (Georgekutty) ಕಥೆ ದೃಶ್ಯಂ 4ರಲ್ಲಿ ಮುಂದುವರಿಯಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ನಿರ್ಮಾಪಕ ಆಂಟನಿ ಪೆರುಂಬಾವೂರ್ ಅವರು, ದೃಶ್ಯಂ ಸಿನಿಮಾದ ನಾಲ್ಕನೇ ಅಧ್ಯಾಯ ಬರಲಿದೆ ಎಂದು ಖಚಿತಪಡಿಸಿದ್ದಾರೆ. ಈ ಮೂಲಕ ಜಾರ್ಜ್‌ಕುಟ್ಟಿ ಕಥೆ ಇನ್ನು ಮುಗಿದಿಲ್ಲ. ದೃಶ್ಯಂ 4ರಲ್ಲಿ (Drishyam 3) ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆ ಗ್ಯಾರಂಟಿ ಇಲ್ಲ, ಆದ್ರೆ ತಾಯಿ ಆಗ್ತೀನಿ – ಸೀಕ್ರೆಟ್ ರಿವೀಲ್ ಮಾಡಿದ ಉರ್ಫಿ

ಮಲಯಾಳಂ ಕ್ರೈಮ್-ಥ್ರಿಲ್ಲರ್ ದೃಶ್ಯಂ ಸಿನಿಮಾದ ಮತ್ತೊಂದು ಅಧ್ಯಾಯದಲ್ಲಿ ಜಾರ್ಜ್‌ಕುಟ್ಟಿ ಪಾತ್ರಕ್ಕಾಗಿ ನಟ ಮೋಹನ್‌ಲಾಲ್ ಅವರು ಮತ್ತೆ ತೆರೆಮೇಲೆ ಬರಲಿದ್ದಾರೆ. ನಿರ್ಮಾಪಕರು ಸಿನಿಮಾದ ಕಥಾವಸ್ತುವಿನ ಬಗ್ಗೆ ಬಹಿರಂಗಪಡಿಸಿಲ್ಲವಾದರೂ ಪ್ರೇಕ್ಷಕರಲ್ಲಿ ಜಾರ್ಜ್‌ಕುಟ್ಟಿ ಹಾಗೂ ಆತನ ಕುಟುಂಬ ಬಗ್ಗೆ ಮತ್ತಷ್ಟು ಕೂತುಹಲ ಹುಟ್ಟುವಂತೆ ಮಾಡಿದೆ.
`ದೃಶ್ಯಂ 3′ ಸಿನಿಮಾ 2026ರ ಮೇ 21ರಂದು ತೆರೆಕಂಡಿತ್ತು. ಪ್ರೇಕ್ಷಕರು ಇದೇ ಕೊನೆಯ ಬಾರಿ ಮೋಹನ್‌ಲಾಲ್ ಅವರು ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದುಕೊಂಡೇ ಸಿನಿಮಾ ವೀಕ್ಷಿಸಿದ್ದರು. ಆದರೆ ಇದೀಗ ಮತ್ತೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. `ದೃಶ್ಯಂ 4′ ಅಧಿಕೃತವಾಗಿ ಘೋಷಣೆಯಾದ ಬಳಿಕ ನಿರ್ದೇಶಕ ಜೀತು ಜೋಸೆಫ್ ಅವರು ಜಾರ್ಜ್‌ಕುಟ್ಟಿ ಯ ಕಥೆಯನ್ನು ಹೇಗೆ ಹೆಣೆಯುತ್ತಾರೆ ಎನ್ನೋದು ಸದ್ಯದ ಸಸ್ಪೆನ್ಸ್.

ಸಿನಿಮಾದ ತಾರಾಗಣ, ಕಥಾವಸ್ತು ಹೆಚ್ಚಿನ ವಿವರಗಳು ಮುಂಬರುವ ತಿಂಗಳುಗಳಲ್ಲಿ ಹೊರಬರುವ ನಿರೀಕ್ಷೆಯಿದೆ. 2013ರಲ್ಲಿ ತೆರೆಕಂಡ `ದೃಶ್ಯಂ’ ಚಿತ್ರದ ಯಶಸ್ಸು ಕೇರಳದ ಗಡಿದಾಟಿತ್ತು. ಮೂಲ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿತ್ತು.ಇದನ್ನೂ ಓದಿ: ಬಿಕಿನಿಯಲ್ಲೇ ಯಾಕೆ ರಾಖಿ ಕಟ್ಬೇಕು? – ಉದ್ದೇಶಪೂರ್ವಕವಾಗಿ ಅಸಹ್ಯಗೊಳಿಸಿದಂತಿದೆ: ಕೃತಿ ಜಾಹೀರಾತಿಗೆ ಕಂಗನಾ ಕೆಂಡ
