ಇಂದು ಬೆಳಗ್ಗೆ ನಿಧನರಾದ ಹಾಸ್ಯ ನಟ ಮೋಹನ್ ಜುನೇಜ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮರೆದಿದ್ದಾರೆ ಮೋಹನ್ ಕುಟುಂಬ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನು ಪ್ರೇರಣೆಯಾಗಿ ತಗೆದುಕೊಂಡಿದ್ದ ಇವರು, ನೇತ್ರದಾನಕ್ಕೆ ಒಲವು ತೋರಿದ್ದರಂತೆ. ಹಾಗಾಗಿ ಮೋಹನ್ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರ ಆಸೆಯನ್ನು ಕುಟುಂಬ ಈಡೇರಿಸಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
Advertisement
ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಈ ಅನಾರೋಗ್ಯದ ನಡುವೆಯೂ ಅವರು ಉಪೇಂದ್ರ ನಟನೆಯ ಕಬ್ಜ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದರು. ಜೀ ಕನ್ನಡ ವಾಹಿನಿಯ ಹೆಸರಾಂತ ಧಾರಾವಾಹಿ ಹಿಟ್ಲರ್ ಕಲ್ಯಾಣದಲ್ಲೂ ಅವರು ಪಾತ್ರ ನಿರ್ವಹಿಸುತ್ತಿದ್ದರು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
Advertisement
Advertisement
ಕೆಜಿಎಫ್ ಚಾಪ್ಟರ್ ಒಂದು ಮತ್ತು ಎರಡರಲ್ಲೂ ಮೋಹನ್ ಜುನೇಜಾ ವಿಶೇಷ ಪಾತ್ರ ಮಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಮಸ್ ಮನೋಜ್ ಸೇವೆಯನ್ನು ನೆನಪಿಸಿಕೊಂಡಿದೆ. ‘ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು’ ಎಂದು ಟ್ವಿಟ್ ಮಾಡಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
Advertisement
ವಾಲ್ ಪೋಸ್ಟರ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಗಣೇಶ್ ನಟನೆಯ ಚೆಲ್ಲಾಟ ಚಿತ್ರದಿಂದ ಫೇಮಸ್ ಆದರು. ಜೋಗಿ, ಕಬ್ಜ, ಜೇಮ್ಸ್ ಹೀಗೆ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಕೆಜಿಎಫ್ ಚಿತ್ರದಲ್ಲೂ ಅವರು ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದರು. ಕಿರುತೆರೆ ಮತ್ತು ಸಿನಿಮಾ ಎರಡೂ ರಂಗದಲ್ಲೂ ಸಕ್ರೀಯರಾಗಿದ್ದರು.