ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ (Varanasi) 6,700 ಕೋಟಿ ರೂ. ಮೌಲ್ಯದ 23 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಭಾನುವಾರ ಪ್ರಧಾನಿಯವರು ನಗರದಲ್ಲಿ ಕಂಚಿ ಮಠದ ವತಿಯಿಂದ ನಡೆಯುತ್ತಿರುವ ಆರ್.ಜೆ ಶಂಕರ ನೇತ್ರಾಲಯವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕಾಶಿಗೆ ಮಹತ್ವದ ದಿನ. ಮುಂಜಾನೆ ನಾನು ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದೆ. ಆರ್.ಜೆ ಶಂಕರ ನೇತ್ರಾಲಯವು ವೃದ್ಧರು ಮತ್ತು ಮಕ್ಕಳಿಗೆ ಸಾಕಷ್ಟು ಸಹಾಯವನ್ನು ಮಾಡುತ್ತದೆ ಎಂದರು. ಇದನ್ನೂ ಓದಿ: ಚನ್ನಪಟ್ಟಣ ಟಿಕೆಟ್ ಕಗ್ಗಂಟು – ದೆಹಲಿಗೆ ಹೊರಟ ವಿಜಯೇಂದ್ರ
ದೇಶಕ್ಕೆ ಮೂರನೇ ಬಾರಿ ಸೇವೆ ಸಲ್ಲಿಸಲು ಜನರು ನನ್ನನ್ನು ಆಶೀರ್ವದಿಸಿದ ನಂತರ, ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ದೇಶದಲ್ಲಿ 15 ಲಕ್ಷ ಕೋಟಿ ರೂ ಮೌಲ್ಯಕ್ಕೂ ಹೆಚ್ಚಿನ ಯೋಜನೆಗಳಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು
ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದವರು ಕಾಶಿ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಅವರು ಕಾಶಿ (Kashi) ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿದ್ದಾರೆ. ಕಾಶಿಯ ಅಭಿವೃದ್ಧಿ ಅವರ ಆದ್ಯತೆಯಾಗಿರಲಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 6 ಇಂಡಿಗೋ ವಿಮಾನಗಳಲ್ಲಿ 12 ಬಾಂಬ್ – ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಬೆದರಿಕೆ