ಹಾಸನ: ಎತ್ತಿನಹೊಳೆ ಯೋಜನೆಯ (Ettinahole Project) 2ನೇ ಹಂತದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ ಯೋಜನೆ ಕಾಮಗಾರಿಯನ್ನು ನಡೆಸದಂತೆ ಅರಣ್ಯ ಇಲಾಖೆಯು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದೆ. ಹೀಗಾಗಿ 5 ಕಿಮೀ ನೀರು ಹರಿಸುವ ಕಾಮಗಾರಿ ಸ್ಥಗಿತಗೊಂಡ ಕಾರಣ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯದಾಗಿದೆ.
ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗಿದ್ದರೂ, ಸದ್ಯ ಎರಡನೇ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಸೆ.6 ರಂದು ಸಿಎಂ (CM Siddaramaiah), ಡಿಸಿಎಂ ಚಾಲನೆ ನೀಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಡ್ಡಿಯಿಂದ ಅರಸೀಕೆರೆ ತಾಲ್ಲೂಕಿನ, ಕೆರೆಗಳಿಗೆ ತಲುಪಬೇಕಿದ್ದ ನೀರು ವಾಣಿ ವಿಲಾಸ ಸಾಗರಕ್ಕೆ ಹರಿದಿದೆ. ಬೇಲೂರು ತಾಲ್ಲೂಕಿನ, ಐದಳ್ಳ ಕಾವಲು ಬಳಿ 5 ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದ್ದು ಇಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಸದಂತೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದೆ. ಇದರಿಂದಾಗಿ ಈ ವರ್ಷವೂ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯದಂತಾಗಿದೆ. ಇದನ್ನೂ ಓದಿ: 6 ಇಂಡಿಗೋ ವಿಮಾನಗಳಲ್ಲಿ 12 ಬಾಂಬ್ – ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಬೆದರಿಕೆ
Advertisement
Advertisement
8,000 ಕೋಟಿ ರೂ.ನಿಂದ ಆರಂಭವಾದ ಎತ್ತಿನಹೊಳೆ ಕಾಮಗಾರಿಯ ವೆಚ್ಚ ಇದೀಗ 23,251 ಕೋಟಿ ರೂ. ಅಧಿಕವಾಗಿದೆ. 2ನೇ ಹಂತದಲ್ಲಿ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ, ಈ ನೀರನ್ನು 43 ಕಿ.ಮೀನಿಂದ ಮುಂದೆ ಹರಿಸಲು ಸಾಧ್ಯವಾಗದೆ, ನೀರನ್ನು ಹಿಡಿಟ್ಟುಕೊಳ್ಳಲೂ ಆಗದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಸಮೀಪವಿರುವ ವಾಣಿ ವಿಲಾಸ ಸಾಗರಕ್ಕೆ ಹರಿಸಬೇಕಾದ ದುಸ್ತಿತಿ ಎದುರಾಗಿದೆ. ಇದಕ್ಕೆಲ್ಲ ಕಾರಣ ಅರಣ್ಯ ಇಲಾಖೆ ಎಂಬುದು ಜನಪ್ರತಿನಿಧಿಗಳು, ಬಯಲುಸೀಮೆ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ನಡೆಸದಂತೆ ಅರಣ್ಯ ಇಲಾಖೆ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಇದರಿಂದಾಗಿ 5 ಕಿ.ಮೀ ನೀರು ಹರಿಸುವ ಕಾಮಗಾರಿ ಸ್ಥಗಿತಗೊಂಡಿದೆ. ಇದನ್ನೂ ಓದಿ: ನಾನು ಅಭ್ಯರ್ಥಿ ಆಗಬೇಕು ಅಂತ ಒತ್ತಾಯ ಮಾಡಿದ್ದಾರೆ – ಡಿ.ಕೆ.ಸುರೇಶ್
Advertisement
Advertisement
ಅರಸೀಕೆರೆ ತಾಲ್ಲೂಕಿಗೆ ಮೊದಲನೇ ಹಂತದಲ್ಲಿ 1.03 ಟಿಎಂಸಿ ಹಂಚಿಕೆ ಮಾಡಬೇಕಿತ್ತು. ಇದರಿಂದ ಅರಸೀಕೆರೆ ತಾಲ್ಲೂಕಿನಲ್ಲಿರುವ 46 ಬೃಹತ್ ಕೆರೆಗಳು ಭರ್ತಿಯಾಗುತ್ತಿದ್ದವು. ಐದಳ್ಳ ಕಾವಲು ಬಳಿ ಕಾಮಗಾರಿಗೆ ಅರಣ್ಯ ಇಲಾಖೆಯಿಂದ (Forest Department) ಅಡ್ಡಿಯಾಗಿದ್ದು, ಇದೀಗ ಅರಣ್ಯ ಇಲಾಖೆಗೆ 5 ಕಿ.ಮೀ ಅರಣ್ಯ ಜಾಗದ ಬದಲಾಗಿ ಅರಸೀಕೆರೆ ತಾಲ್ಲೂಕಿನಲ್ಲಿರುವ 350 ಎಕರೆ ಸರ್ಕಾರಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ 5 ಕಿ.ಮೀ ಜಾಗವನ್ನು ಬಿಡಿಸಿಕೊಳ್ಳಲಾಗಿದೆ. ಇನ್ನೆರಡು 2-3 ತಿಂಗಳಲ್ಲಿ ಆ ಜಾಗ ಕುಲ್ಲಾ ಆಗಲಿದ್ದು, ಕಾಮಗಾರಿ ಆರಂಭವಾಗಲಿದೆ. ಮುಂದಿನ ವರ್ಷ ನೂರಕ್ಕೆ ನೂರು ಭಾಗ ಜೂನ್ ತಿಂಗಳಿನಿಂದ ಅರಸೀಕೆರೆಯ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಎತ್ತಿನಹೊಳೆ ಯೋಜನೆಯ ನೀರು ಅರಸೀಕೆರೆಗೆ ಬರಲಿದೆ ಎಂದು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ತಾಯಿಗೆ ಅಂತಿಮ ನಮನ ಸಲ್ಲಿಸಿದ ಧ್ರುವ ಸರ್ಜಾ,ಗಣೇಶ್
ಕಾಮಗಾರಿ ಆರಂಭವಾದಗಿನಿಂದಲೂ ಮೊದಲನೇ ಹಂತದಲ್ಲಿ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮುಕ್ಕಾಲು ಭಾಗದಷ್ಟು ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಈ ಭಾಗದ ರೈತರು ಕನಸು ಕಂಡಿದ್ದರು. ಆದರೆ ಈ ವರ್ಷವೂ ನೀರು ಹರಿಯದಿದ್ದರಿಂದ ನಿರಾಸೆಗೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!