ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಖಾತೆ ಹಂಚಿಕೆ ಮಾಡಿದ ಸಚಿವರ ಪೈಕಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರಿಗೆ ಸ್ಥಾನ ಸಿಕ್ಕಿದೆ. ಉಳಿದ 11 ಸ್ಥಾನ ಎನ್‌ಡಿಎ (NDA) ಮಿತ್ರಪಕ್ಷಗಳ ಪಾಲಾಗಿದೆ. ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ (Modi Cabinet Meeting) ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
Advertisement
Advertisement
ಮೋದಿ ಸಂಪುಟದ ವಿಶೇಷತೆ ಏನು?
ಪ್ರಧಾನಿ ಮೋದಿ ಸಂಪುಟದಲ್ಲಿ 72 ಸಚಿವರಲ್ಲಿ 61 ಮಂದಿ ಬಿಜೆಪಿಗರು ಸ್ಥಾನ ಪಡೆದುಕೊಂಡಿದ್ದಾರೆ. ಮಿತ್ರಪಕ್ಷಗಳ 11 ಸಂಸದರಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್
Advertisement
ಖಾತೆ ಪಡೆದ ಸಚಿವರ ಪೈಕಿ ಉತ್ತರ ಪ್ರದೇಶಕ್ಕೆ ಗರಿಷ್ಠ ಸಚಿವ ಸ್ಥಾನ ಸಿಕ್ಕಂತಾಗಿದೆ ಸಂಪುಟ ದರ್ಜೆಯ 9 ಮಂದಿಗೆ ಮಂತ್ರಿ ಭಾಗ್ಯ ದೊರೆತಿದೆ. ಬಿಹಾರದ 8 ಸಂಸದರು, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದ ಐವರು, ಆಂಧ್ರ, ತಮಿಳುನಾಡಿನ ತಲಾ ಮೂವರು (ನಿರ್ಮಲಾ,ಜೈಶಂಕರ್, ಮುರುಗನ್), ಕೇರಳದಲ್ಲಿ ಖಾತೆ ತೆರೆಯಲು ಕಾರಣವಾದ ಸುರೇಶ್ ಗೋಪಿ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಸಿನಿಮಾ ಕಾರಣಕ್ಕಾಗಿ ಸಚಿವ ಸ್ಥಾನ ತಿರಸ್ಕಾರಕ್ಕೆ ಮುಂದಾಗಿದ್ದ ಸುರೇಶ್ ಗೋಪಿ ಅವರು ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Advertisement
ಅಲ್ಲದೇ ಹರಿಯಾಣದಲ್ಲಿ ಗೆದ್ದ ಐವರಲ್ಲಿ ಮೂವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇನ್ನೂ 9 ಸ್ಥಾನಗಳು ಮೋದಿ ಸಂಪುಟದಲ್ಲಿ ಖಾಲಿಯಿದ್ದು, ಮುಂದೆ ಎನ್‌ಸಿಪಿ, ಜನಸೇನೆ ಇತರೆ ಪಕ್ಷಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿಗೆ ಬಾಹ್ಯಾಕಾಶ, ಅಮಿತ್ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್