ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ನಾಲ್ವರು ಸೇರಿದಂತೆ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅದರ ಪಟ್ಟಿ ಈ ಕೆಳಗಿನಂತಿದೆ…
Advertisement
ಸಂಪುಟ ದರ್ಜೆ ಸಚಿವರ ಪಟ್ಟಿ – ಯಾರಿಗೆ ಯಾವ ಖಾತೆ?
- ಅಮಿತ್ ಶಾ – ಗೃಹ ಖಾತೆ
- ರಾಜನಾಥ್ ಸಿಂಗ್ – ರಕ್ಷಣಾ ಖಾತೆ
- ನಿತಿನ್ ಗಡ್ಕರಿ – ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
- ಜೆ.ಪಿ.ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಸಾಯನಿಕ ಮತ್ತು ರಸಗೊಬ್ಬರ
- ಶಿವರಾಜ್ ಸಿಂಗ್ ಚೌಹಾಣ್ – ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
- ಎಸ್.ಜೈ ಶಂಕರ್ – ವಿದೇಶಾಂಗ ವ್ಯವಹಾರಗಳ ಖಾತೆ
- ಮನೋಹರ ಲಾಲ್ ಖಟ್ಟರ್ – ಇಂಧನ ಮತ್ತು ವಸತಿ
- ಹೆಚ್.ಡಿ.ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್ ಕೈಗಾರಿಕೆ
- ಪಿಯೂಷ್ ಗೋಯಲ್ – ವಾಣಿಜ್ಯ
- ಧರ್ಮೇಂದ್ರ ಪ್ರಧಾನ್ – ಶಿಕ್ಷಣ, ಮಾನವ ಸಂಪನ್ಮೂಲ
- ಜಿತನ್ ರಾಮ್ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ
- ರಾಜೀವ್ ರಂಜನ್ ಸಿಂಗ್ – ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಇಲಾಖೆ
- ಸರ್ಬಾನಂದ ಸೋನೊವಾಲ್ – ಬಂದರು, ಜಲಸಾರಿಗೆ
- ರಾಮ್ ಮೋಹನ್ ನಾಯ್ಡು – ನಾಗರಿಕ ವಿಮಾನಯಾನ
- ಪ್ರಹ್ಲಾದ್ ಜೋಶಿ – ಆಹಾರ ಮತ್ತು ನಾಗರಿಕ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ,
- ಡಾ.ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
- ಜುವೆಲ್ ಒರಾಮ್ – ಬುಡಕಟ್ಟು
- ಗಿರಿರಾಜ್ ಸಿಂಗ್ - ಜವಳಿ
- ಅಶ್ವಿನಿ ವೈಷ್ಣವ್ – ರೈಲ್ವೇ, ವಾರ್ತಾ ಮತ್ತು ಮಾಹಿತಿ ಪ್ರಸಾರ, ಐಟಿ
- ಜ್ಯೋತಿರಾದಿತ್ಯ ಸಿಂಧಿಯಾ – ಟೆಲಿಕಾಮ್
- ಭೂಪೇಂದ್ರ ಯಾದವ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
- ಗಜೇಂದ್ರ ಸಿಂಗ್ ಶೇಖಾವತ್ : ಪ್ರವಾಸೋದ್ಯಮ ಮತ್ತು ಸಂಸ್ಕೃತಿ
- ಅನ್ನಪೂರ್ಣ ದೇವಿ -ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಕಿರಣ್ ರಿಜಿಜು - ಸಂಸದೀಯ ವ್ಯವಹಾರ
- ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ
- ಡಾ.ಮನ್ಸುಖ್ ಮಂಡಾವೀಯ – ಕಾರ್ಮಿಕ ಮತ್ತು ಉದ್ಯೋಗ
- ಜಿ.ಕಿಶನ್ ರೆಡ್ಡಿ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
- ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣೆ
- ಸಿ.ಆರ್.ಪಾಟೀಲ್ -ಜಲಶಕ್ತಿ (ಜಲಸಂಪನ್ಮೂಲ)
ಸ್ವತಂತ್ರ ಖಾತೆ ನಿರ್ವಹಣೆ
- ಇಂದ್ರಜೀತ್ ಸಿಂಗ್ – ಸಾಂಖ್ಯಿಕ, ಯೋಜನೆ ಅನುಷ್ಠಾನ, ಯೋಜನೆ ಮತ್ತು ಸಂಸ್ಕೃತಿ
- ಡಾ.ಜಿತೇಂದ್ರ ಸಿಂಗ್- ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಬಾಹ್ಯಾಕಾಶ, ಪರಮಾಣು
- ಅರ್ಜುನ್ ರಾಮ್ ಮೇಘ್ವಾಲ್ – ಕಾನೂನು ಮತ್ತು ನ್ಯಾಯ
- ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ (ಶಿಂಧೆ ಬಣ) – ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಜಯಂತ್ ಚೌಧರಿ – ಕೌಶಲಾಭಿವೃದ್ಧಿ ಹಾಗೂ ಉದ್ಯಮ, ಶಿಕ್ಷಣ
ರಾಜ್ಯ ಖಾತೆ ಸಚಿವರು
- ಜಿತಿನ್ ಪ್ರಸಾದ್ – ವಾಣಿಜ್ಯ, ಕೈಗಾರಿಕೆ, ವಿದ್ಯುತ್ ಮತ್ತು ಮಾಹಿತಿ ತಂತ್ರಜ್ಞಾನ
- ಶ್ರೀಪಾದ್ ನಾಯ್ಕ್ – ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
- ಪಂಕಜ್ ಚೌಧರಿ - ಹಣಕಾಸು
- ಕ್ರಿಶನ್ ಪಾಲ್ – ಸಹಕಾರ
- ರಾಮ್‌ದಾಸ್ ಅಠಾವಳೆ – ಸಾಮಾಜಿಕ ನ್ಯಾಯ
- ರಾಮನಾಥ್ ಠಾಕೂರ್ – ಕೃಷಿ ಮತ್ತು ರೈತರ ಕಲ್ಯಾಣ
- ನಿತ್ಯಾನಂದ್ ರಾಯ್ – ಗೃಹ
- ಅನುಪ್ರಿಯಾ ಪಟೇಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
- ವಿ. ಸೋಮಣ್ಣ – ಜಲಶಕ್ತಿ ಹಾಗೂ ರೈಲ್ವೆ
- ಪೆಮ್ಮಸಾನಿ ಚಂದ್ರಶೇಖರ್ – ಗ್ರಾಮೀಣಾಭಿವೃದ್ಧಿ, ಸಂವಹನ
- ಎಸ್‌ಪಿ ಸಿಂಗ್ ಬಘೇಲ್ – ಮೀನುಗಾರಿಕೆ, ಪಶು ಸಂಗೋಪನೆ, ಪಂಚಾಯತ್ ರಾಜ್
- ಶೋಭಾ ಕರಂದ್ಲಾಜೆ - ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ
- ಕೀರ್ತಿ ವರ್ಧನ್ ಸಿಂಗ್ – ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ, ವಿದೇಶಾಂಗ ಇಲಾಖೆ
- ಬಿ.ಎಲ್.ವರ್ಮಾ – ಗ್ರಾಹಕ ರಕ್ಷಣೆ, ಆಹಾರ, ನಾಗರಿಕ ಪೂರೈಕೆ, ಸಾಮಾಜಿಕ ನ್ಯಾಯ
- ಶಂತನು ಠಾಕೂರ್ – ಬಂದರು, ಜಲಸಾರಿಗೆ ಮತ್ತು ಜಲಮಾರ್ಗ
- ಸುರೇಶ್ ಗೋಪಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ
- ಡಾ.ಎಲ್.ಮುರುಗನ್ – ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ
- ಅಜಯ್ ತಮ್ಟಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
- ಬಂಡಿ ಸಂಜಯ್ ಕುಮಾರ್ – ಗೃಹ
- ಕಮಲೇಶ್ ಪಾಸ್ವಾನ್ – ಗ್ರಾಮೀಣಾಭಿವೃದ್ಧಿ
- ಭಾಗೀರಥ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
- ಸತೀಶ್ ಚಂದ್ರ ದುಬೆ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
- ಸಂಜಯ್ ಸೇಠ್ – ರಕ್ಷಣಾ ಖಾತೆ
- ರವನೀತ್ ಸಿಂಗ್ ಬಿಟ್ಟು – ಆಹಾರ ಸಂಸ್ಕರಣೆಗಳ ಉದ್ಯಮ ಮತ್ತು ರೈಲ್ವೆ
- ದುರ್ಗಾದಾಸ್ ಉಯಿಕೆ – ಬುಡಕಟ್ಟು ವ್ಯವಹಾರಗಳ ಇಲಾಖೆ
- ರಕ್ಷಾ ನಿಖಿಲ್ ಖಡ್ಸೆ – ಯುವಜನ ಮತ್ತು ಕ್ರೀಡೆ
- ಸುಕಾಂತ ಮಜುಂದಾರ್ – ಶಿಕ್ಷಣ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ
- ಸಾವಿತ್ರಿ ಠಾಕೂರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ತೋಖನ್ ಸಾಹು – ವಸತಿ ಮತ್ತು ನಗರಾಭಿವೃದ್ಧಿ
- ಡಾ.ರಾಜ್‌ಭೂಷಣ್ ಚೌಧರಿ – ಜಲಶಕ್ತಿ
- ಭೂಪತಿ ರಾಜು ಶ್ರೀನಿವಾಸ್ ವರ್ಮಾ – ಬೃಹತ್ ಕೈಗಾರಿಕೆ ಮತ್ತು ಉಕ್ಕು
- ಹರ್ಷ ಮಲ್ಹೋತ್ರಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆ
- ನಿಮುಬೆನ್ ಬಾಂಭಣಿಯಾ – ಗ್ರಾಹಕ ರಕ್ಷಣೆ, ಆಹಾರ ಮತ್ತು ನಾಗರಿಕ ಪೂರೈಕೆ
- ಮುರಳೀಧರ್ ಮೊಹೊಲ್ – ಸಹಕಾರ ಮತ್ತು ನಾಗರಿಕ ವಿಮಾನಯಾನ
- ಜಾರ್ಜ್ ಕುರಿಯನ್ – ಅಲ್ಪಸಂಖ್ಯಾತ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ
- ಪವಿತ್ರ ಮಾರ್ಗರಿಟಾ – ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ