ಬಿಗ್ ಬಾಸ್ ಮನೆಗೆ (Bigg Boss Kannada 10) ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿರೋ ಕೊಡಗಿನ ಕುವರಿ ಪವಿ ಪೂವಪ್ಪ (Pavi Poovappa) ಅವರು ಬಿಗ್ ಬಾಸ್‌ನಿಂದ ಬಂದಿರುವ ಅವಕಾಶದ ಬಗ್ಗೆ ಜಿಯೋ ಸಿನಿಮಾ ಸಂದರ್ಶನದಲ್ಲಿ ದೊಡ್ಮನೆಗೆ ಕಾಲಿಡುವ ಮುನ್ನ ಮಾತನಾಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪವಿ ಪೂವಪ್ಪ, ಬಿಗ್‌ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು, ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೂ ಕ್ಷಣಕಾಲ ಮೊದಲು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಾನು ಮಾಡೆಲ್ ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ತುಂಬ ಖುಷಿಯ ವಿಷಯ. ಎಕ್ಸೈಟ್‌ಮೆಂಟ್ ತುಂಬಾನೇ ಇದೆ. ಆದರೆ ಭಯ ಇಲ್ಲ. ಬಿಗ್‌ಬಾಸ್ ಮನೆಯೊಳಗೆ ಹೋದಮೇಲೇ ಗೊತ್ತಾಗತ್ತೆ ಏನು ಎತ್ತ ಅಂತ. ಮನೆಯಲ್ಲಿ ಅಮ್ಮ ಅಣ್ಣನಿಗೆ ಎಲ್ಲಾ ತುಂಬ ಖುಷಿಯಾಯ್ತು.
ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಿಹೇವಿಯರ್ ಎಲ್ಲವನ್ನು ಇಡೀ ಕರ್ನಾಟಕದ ಜನರು ನೋಡಬಹುದು ಇಲ್ಲಿ. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ. ನಾನು ಶಾರ್ಟ್ ಟೆಂಪರ್ಡ್. ಆದ್ರೆ ಸಂದರ್ಭದ ಮೇಲೆ ಹೋಗತ್ತದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ
ವೈಲ್ಡ್ ಕಾರ್ಡ್ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ. ಅಲ್ಲಿ ಹೋದ ಮೇಲೆ ಯಾರು ಯಾವ ಥರ ಬಿಹೇವ್ ಮಾಡ್ತಾರೆ ಅನ್ನೋದ್ರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ. ನಾನು ಫಿಜಿಕಲಿ ಸ್ಟ್ರಾಂಗ್ ಇದ್ದೀನಿ. ಅದು ನನ್ನ ಸ್ಟ್ರೈಂಥ್ ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್ ಆಗಿದೆ.
ಸದ್ಯಕ್ಕೆ ನನ್ನ ಫೇವರೇಟ್ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದರೆ ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜೊತೆಗೆ. ಯಾಕಂದ್ರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್ ಕಾರ್ಡ್‌ನಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದ್ದೀನಿ ಎಂದು ಪವಿ ಮಾತನಾಡಿದ್ದಾರೆ.