ಚಿರು ಜೊತೆ ಸುಮಲತಾ ಡ್ಯಾನ್ಸ್- ವೈರಲ್ ವಿಡಿಯೋಗೆ ಸಂಸದೆ ಸ್ಪಷ್ಟನೆ

Public TV
1 Min Read
SUMALATHA copy

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಜೊತೆ ಮಂಡ್ಯ ಸಂಸದೆ ಸುಮಲತಾ ಸ್ಟೆಪ್ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.

ಚಿರಂಜೀವಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುಮಲತಾ ಅವರ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋ ಇದೆ. ಇದಕ್ಕೆ ಕಿಡಿಕಾರಿರುವ ಜನರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರಬೇಕಾದರೆ ಸುಮಲತಾ ಡ್ಯಾನ್ಸ್ ಮಾಡಿರುವುದು ಸರಿನಾ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ  ಇದು ಹಳೆಯ ವಿಡಿಯೋ ಎಂದು ಸುಮಲತಾ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.

ಇದು 4 ವರ್ಷಗಳ ಹಿಂದಿನ ಹಳೆಯ ವಿಡಿಯೋ ಆಗಿದೆ. ನನ್ನ ಹೆಸರಿನ ನಕಲಿ ಅಕೌಂಟ್‍ನಲ್ಲಿ ಕಿಡಿಗೇಡಿಗಳು ವಿಡಿಯೋ ಹಾಕಿದ್ದು, ಇದರಿಂದ ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂಸದೆ  ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಗುರುವಾರವಷ್ಟೇ ನಕಲಿ ಅಕೌಂಟ್ ಗಳ ಬಗ್ಗೆ ತಮ್ಮ ಫೆಸ್ ಬುಕ್ ಪೇಜಿನಲ್ಲಿ ಸುಮಲತಾ ಅವರು ಬರೆದುಕೊಂಡಿದ್ದರು.

SUMALATHA CHIRAJIVI 2 copy

ನಕಲಿ ಅಕೌಂಟ್ ಬಗ್ಗೆ ಪೋಸ್ಟ್:
ನನ್ನ ಹೆಸರಿನಲ್ಲಿ ಹಲವಾರು ನಕಲಿ ಫೇಸ್‍ಬುಕ್ ಖಾತೆಗಳನ್ನು ರಚಿಸಲಾಗಿದೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಸೈಬರ್ ಅಪರಾಧ ಶಾಖೆಯ ಸಹಾಯದಿಂದ ಈ ಕಿಡಿಗೇಡಿ ತನದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ನೇಹಿತರಿಗಾಗಿ ಪರಿಶೀಲಿಸಿದ ಫೇಸ್‍ಬುಕ್ ಖಾತೆಯಾಗಿದೆ ಮತ್ತು ನನ್ನ ಸದಸ್ಯರೊಂದಿಗೆ ಸಂವಹನ ನಡೆಸುವ ಇನ್ನೊಂದು ಅಧಿಕೃತ ಪುಟವನ್ನು ಮಾತ್ರ ಹೊಂದಿದ್ದೇನೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

ಇದೇ ವೇಳೆ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಗಳ ಲಿಂಕ್ ಶೇರ್ ಮಾಡಿರುವ ಅವರು, ಯಾವುದೇ ಅನಧಿಕೃತ ಪುಟವನ್ನು ಯಾರಾದರೂ ಗಮನಿಸಿದರೆ ದಯವಿಟ್ಟು ಅದನ್ನು ತಕ್ಷಣ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಕೆಲ ನಕಲಿ ಖಾತೆಗಳ ಸ್ಕ್ರೀನ್ ಸಾಟ್‍ಗಳನ್ನು ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *