ಬೆಂಗಳೂರು: ಬಾನು ಮುಷ್ತಾಕ್ (Banu Mushtaq) ಅವರಿಂದ ದಸರಾ (Dasara) ಉದ್ಘಾಟನೆ ಮಾಡಿಸಿ ನಮ್ಮ ಸರ್ಕಾರ ಜಾತ್ಯಾತೀತ ಸರ್ಕಾರ ಅಂತ ತೋರಿಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಬಿಜೆಪಿ (BJP) ವಿರೋಧ ಮಾಡುತ್ತಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ದಸರಾ ನಮ್ಮ ನಾಡಹಬ್ಬ. ಬಾನು ಮುಷ್ತಾಕ್ ನಮ್ಮ ಕನ್ನಡದ ಹೆಣ್ಣು ಮಗಳು. ʻಎದೆಯ ಹಣತೆʼಎಂಬ ಅವರ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಅವರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದೇ ಹೋಗಿದ್ರೆ ಎದೆಯ ಅಣತೆ ಪುಸ್ತಕವನ್ನು ಕನ್ನಡದಲ್ಲಿ ಬರೆಯದೇ ಉರ್ದುನಲ್ಲಿ ಬರೆಯುತ್ತಿದ್ದರು. ನಮ್ಮ ಸರ್ಕಾರ ಅವರಿಗೆ ಗೌರವ ನೀಡಿದೆ. ಇದು ನಿಜವಾಗಿಯೂ ಜಾತ್ಯಾತೀತಕ್ಕೆ ಕೊಡ್ತೀರೋ ಗೌರವ ಎಂದರು. ಇದನ್ನೂ ಓದಿ: ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ: ಬಾನು ಮುಷ್ತಾಕ್
ಹಿಂದೆ ರಾಜರು ಮಿರ್ಜಾ ಇಸ್ಮಾಯಿಲ್ ಅವರನ್ನ ಕೂರಿಸಿಕೊಂಡು ದಸರಾ ಮಾಡಿದ್ದಾರೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡಬಾರದು ಅಂತ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗಿದ್ರು, ಬಿಜೆಪಿಯವರಿಗೆ ಮುಖಭಂಗ ಆಯ್ತು. ಸಂವಿಧಾನದ ಪ್ರಕಾರವೇ ನಾವು ಮಾಡಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ದಸರಾ | ಓಲೈಕೆ ರಾಜಕಾರಣ ಅಪಾಯಕಾರಿ: ಸಿದ್ದರಾಮಯ್ಯ