Connect with us

Bellary

ಗಣಿ ನಾಡಲ್ಲಿ ಪರಮೇಶ್ವರ ನಾಯ್ಕ್ ಬೆಂಬಲಿಗರ ದಬ್ಬಾಳಿಕೆ- ಪ್ರಶ್ನೆ ಮಾಡಿದ್ರೆ ಒದ್ದು ಒಳಗೆ ಹಾಕ್ತಾರಂತೆ ಪೊಲೀಸ್ರು

Published

on

ಬಳ್ಳಾರಿ: ದರ್ಪ ದಬ್ಬಾಳಿಕೆಯಿಂದ ಪರಮೇಶ್ವರ ನಾಯ್ಕ್ ಅವರು ತನ್ನ ಸಚಿವ ಸ್ಥಾನ ಕಳೆದುಕೊಂಡು ಶಾಸಕರಾಗಿದ್ದು, ಇದೀಗ ಇವರ ಬೆಂಬಲಿಗರ ದಬ್ಬಾಳಿಕೆ ಮಾತ್ರ ಇನ್ನೂ ಮುಂದುವರೆದಿದೆ.

ಶಾಸಕರ ಬೆಂಬಲಿಗರ ಅಕ್ರಮಗಳು, ದರ್ಪ ದಬ್ಬಾಳಿಕೆಗಳಿಗೆ ಇದೀಗ ಪೊಲೀಸರು ಸಹ ಕೈಜೋಡಿಸಿದ್ದಾರೆ. ಹೂವಿನ ಹಡಗಲಿ ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಐದು ಎಕರೆ ಸರ್ಕಾರಿ ಜಾಗದ ಸಶ್ಮಾನದ ವಿಚಾರದಲ್ಲಿ ಪೊಲೀಸರು ತಮ್ಮ ದರ್ಪ ದಬ್ಬಾಳಿಕೆ ತೋರಿದ್ದಾರೆ.

ಹಿರೇಬನ್ನಿಮಟ್ಟಿ ಗ್ರಾಮದ ಐದು ಎಕರೆ ಸಶ್ಮಾನದಲ್ಲಿ ಈ ಹಿಂದಿನಿಂದಲೂ ವೀರಶೈವ ಸಮಾಜದ ಬಾಂಧವರು ಅಂತ್ಯ ಕ್ರಿಯೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗ್ರಾಮ ಪಂಚಾಯತ್ ಸದಸ್ಯ ಸಿದ್ದನಗೌಡ, ಗುರುಪಾದಗೌಡ, ಸಿಂದನೂರಿನಲ್ಲಿ ಎಫ್‍ಡಿಎ ಆಗಿರುವ ನಾಗರಾಜಗೌಡ ನಿಂಗನಗೌಡ್ರ ಉಳುಮೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮದ ಹಾಲೇಶ ಎಂಬವರಿಗೆ ಹುಸೇನ್ ಪೀರ್ ಸಾಬ್ ಮೂಲಕ ಹಡಗಲಿ ಠಾಣೆಯ ಸಿಪಿಐ ಸುಧೀರ ಜಮೀನಿನ ವಿಷಯಕ್ಕೆ ಬಂದ್ರೆ ಒದ್ದು ಒಳಗೆ ಹಾಕುತ್ತೇನೆ ಎಂದು ದಮ್ಕಿ ಹಾಕಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಧಮ್ಕಿ ಹಾಕಿದ ಆಡಿಯೋ ಬಹಿರಂಗವಾಗುತ್ತಿದ್ದಂತೆ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಶಾಸಕ ಪರಮೇಶ್ವರ ನಾಯ್ಕ್ ಹಾಗೂ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಸಶ್ಮಾನದ ಜಾಗದ ವಿಚಾರದಲ್ಲಿ ಅನಗತ್ಯವಾಗಿ ಪ್ರವೇಶ ಮಾಡುತ್ತಿರುವ ಪೊಲೀಸರ ವಿರುದ್ಧ ಹಾಲೇಶ ಅವರು ಗೃಹಸಚಿವರು ಹಾಗೂ ಎಸ್‍ಪಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *