ಕೊಪ್ಪಳ: ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರಕ್ಕೆ ಡಿಸಿ ಜೊತೆಗಿನ ಮುನಿಸಿಗೆ ಶಾಸಕ ಪರಣ್ಣ ಮುನವಳ್ಳಿ ತೆರೆ ಎಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿಗಳು ಆಕಸ್ಮಿಕವಾಗಿ ಅವಸರದಲ್ಲಿ ಗಾಯಕ ವಿಜಯ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಅವಸರದಲ್ಲಿ ವಿಜಯ್ ಅವರಿಗೆ ಸನ್ಮಾನ ಮಾಡಿದ್ದಾಗಿ ಡಿಸಿ ಹೇಳಿಕೊಂಡಿದ್ದಾರೆ. ನಮ್ಮನ್ನು ಕಡೆಗಣಿಸಿ ಡಿಸಿ ಸನ್ಮಾನ ಮಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದು ನಿಜ. ಯಾವುದೇ ಕಾರ್ಯಕ್ರಮದಲ್ಲಾಗಲಿ ಮೊದಲು ಜನಪ್ರತಿನಿಧಿಗಳು, ನಂತರ ಅಧಿಕಾರಿಗಳು ಇರುತ್ತಾರೆ. ಮೊದಲು ಜನಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದರು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ಗಾಯಕ ವಿಜಯ್ ಪ್ರಕಾಶ್‍ಗೆ ಅವಮಾನ
Advertisement
Advertisement
ಇದು ಡಿಸಿ ವರ್ಸಸ್ ಪರಣ್ಣ ಮುನವಳ್ಳಿ ಉತ್ಸವ ಅಲ್ಲ, ಇದು ಪ್ರತಿಯೊಬ್ಬರ ಉತ್ಸವ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜ. ಹೀಗಾಗಿ ಇದನ್ನು ನಾವು ಸರಿಪಡಿಸಿಕೊಂಡು ಹೋಗಬೇಕು ಎಂದು ಹೇಳಿದರು.
Advertisement
ಗುರುವಾರ ರಾತ್ರಿ ಆನೆಗೊಂದಿ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಚಾರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಡುವೆ ಮನಸ್ತಾಪ ಉಂಟಾಗಿತ್ತು. ಗಾಯಕ ವಿಜಯ್ ಪ್ರಕಾಶ್ ಅವರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಒಬ್ಬರೇ ಸನ್ಮಾನ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಪರಣ್ಣ ಮುನವಳ್ಳಿ ಅವರನ್ನು ಸ್ವತಃ ವಿಜಯ್ ಪ್ರಕಾಶ್ ವೇದಿಕೆಯಿಂದ ಕೆಳಗೆ ಬಂದು ಸಮಾಧಾನ ಮಾಡಿ ವೇದಿಕೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಪರಣ್ಣ ಮುನವಳ್ಳಿ ವಿಜಯ್ ಅವರನ್ನು ಸನ್ಮಾನ ಮಾಡಿದ್ದರು. ಇದರಿಂದಾಗಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ್ ನಡುವೆ ಮನಸ್ತಾಪ ಉಂಟಾಗಿತ್ತು.