#MeToo ಅಭಿಯಾನಕ್ಕೆ ಜಯ – ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ?

Public TV
2 Min Read
mj akbar 1

ನವದೆಹಲಿ: ಮಿಟೂ ಅಭಿಯಾನಕ್ಕೆ ಗುರಿಯಾಗಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜಿ.ಅಕ್ಬರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ನೈಜೀರಿಯಾ ಪ್ರವಾಸದಲ್ಲಿ ಸಚಿವರು ಇಂದು ದೆಹಲಿಗೆ ಆಗಮಿಸಿದ್ದು ಲೈಂಗಿಕ ಕಿರುಕುಳ ಆರೋಪದ ಕುರಿತು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ಇದಕ್ಕೆ ತಕ್ಕ ಹೇಳಿಕೆಯನ್ನು ನಂತರ ನೀಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಇತ್ತ ಸಚಿವ ಅಕ್ಬರ್ ಅವರು ಪ್ರಧಾನ ಮಂತ್ರಿ ಅವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡ ಸಮಯ ಕೋರಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅಧಿಕೃತವಾಗಿ ಪ್ರಧಾನಮಂತ್ರಿಗಳ ಸಚಿವಲಾಯದಿಂದ ರಾಜೀನಾಮೆ ಸಂಬಂಧ ಯಾವುದೇ ಹೇಳಿಕೆ ಪ್ರಕಟವಾಗಿಲ್ಲ.

ಏನಿದು ಪ್ರಕರಣ?:
ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಆರೋಪ ಮಾಡಿದ್ದರು. ಎಂಜಿ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಏಕೆಂದರೆ ಅವರೇನೂ ಮಾಡಿಲ್ಲ. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರು ಅ ಹಂಚಿಕೊಳ್ಳಬಹುದು ಎಂದು ಬರೆದು ಅಕ್ಟೋಬರ್ 8ರಂದು ಟ್ವೀಟ್ ಮಾಡಿದ್ದರು.

https://twitter.com/priyaramani/status/1049279608263245824

ಅಷ್ಟೇ ಅಲ್ಲದೆ ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತು 2017ರ ಅಕ್ಟೋಬರ್ ನಲ್ಲಿ ಲೇಖನವೊಂದನ್ನು ಪ್ರಿಯಾ ರಮಣಿ ಬರೆದಿದ್ದರು. ಪ್ರಿಯಾ ರಮಣಿ ಆರೋಪದ ಬನ್ನಲ್ಲೇ ಅನೇಕ ಪ್ರತಕರ್ತೆಯರು ಅಕ್ಬರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಗಳ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದೇವೆ ಅಂತಾ ಹೇಳಿದ್ದರು. ಇತ್ತ ಎಂ.ಜೆ.ಅಕ್ಬರ್ ವಿರೋಧ ಪಕ್ಷಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದವು.

https://twitter.com/priyaramani/status/1051361254776983552

ಮಿ ಟೂ ಅಭಿಯಾನ:
ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ ಮಿ ಟೂ ಅಭಿಯಾನ ಚುರುಕುಗೊಂಡಿದೆ. ಈ ಅಭಿಯಾನದಲ್ಲಿ ಪುರುಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು #ಮಿಟೂ ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಟಿಯರು, ಕ್ರೀಡಾಪಟುಗಳು ಹಾಗೂ ಇತರ ಮಹಿಳೆಯರು ತಮಗೆ ಆದಂತಹ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದನಿಯೆತ್ತುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *