ಬೆಳಗಾವಿ: ಟಗರು ಕಾಳಗದಲ್ಲಿ (Ram Fighting) ಮಿಂಚುತ್ತಿದ್ದ ರಾಕಿ ಹೆಸರಿನ ಫೈಟರ್ ಟಗರನ್ನು (Rocky Tagaru) ಕಳ್ಳತನ ಮಾಡಿ ಮಟನ್ ಮಾರುಕಟ್ಟೆಯಲ್ಲಿ ಖದೀಮರು ಬಿಟ್ಟು ಹೋದ ಘಟನೆ ತಳಕಟನಾಳ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ಟಗರು ಶನಿವಾರ ಕಳ್ಳತನವಾಗಿತ್ತು. ಈ ಸಂಬಂಧ ಟಗರು ಮಾಲೀಕರು ಗೋಕಾಕ್ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಬೆಂಗಳೂರಿನ ಜಯನಗರದ BMTC ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ತಡರಾತ್ರಿ ಗೋಕಾಕ್ ಮಟನ್ ಮಾರುಕಟ್ಟೆಯಲ್ಲಿ ಟಗರು ಪತ್ತೆಯಾಗಿದೆ. ಗೆಳೆಯರು ನೀಡಿದ ಮಾಹಿತಿಯ ಮೇರೆಗೆ ರಾಕಿಯನ್ನು ಮನೆಗೆ ವಾಪಸ್ ತಂದಿದ್ದು ಟಗರು ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.
15 ದಿನದ ಹಿಂದೆ ರಾಕಿಗೆ 2.50 ಲಕ್ಷ ರೂ. ನೀಡುತ್ತೇವೆ. ನಮಗೆ ಕೊಡಿ ಎಂದು ಟಗರು ಪ್ರಿಯರು ಬೇಡಿಕೆ ಇಟ್ಟಿದ್ದರು. ಯಾವುದೇ ಸ್ಥಳದಲ್ಲಿ ಟಗರು ಕಾಳಗ ನಡೆದರೂ ಗೆಲ್ಲುತ್ತಿದ್ದ ರಾಕಿಯನ್ನು ಕೊಡಲು ಟಗರು ಮಾಲೀಕರು ಹಿಂದೇಟು ಹಾಕಿದ್ದರು. ಟಗರು ಗೆಲ್ಲುವುದನ್ನು ನೋಡಿ ಸಹಿಸಲಾಗದ ವಿರೋಧಿಗಳು ಮನೆಯಲ್ಲಿ ಕಟ್ಟಿದ್ದ ವೇಳೆ ರಾಕಿಯನ್ನು ಕಳ್ಳತನ ಮಾಡಿರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ.
Web Stories