ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರು ನವೆಂಬರ್ 30 ರೊಳಗೆ ಮೈಸೂರಿನ ರಿಂಗ್ ರಸ್ತೆಗಳಿಗೆ (Mysore Ring Road) ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಮೈಸೂರು-ಬೆಂಗಳೂರು ರಸ್ತೆಯ ಜಂಕ್ಷನ್ ದೀಪಗಳನ್ನ ಬೆಳಗಿಸಲಾಗಿತ್ತು. ಆದರೆ ದೀಪ ಬೆಳಗಿದ ಎರಡೇ ದಿನಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
Advertisement
ಸಾತಗಳ್ಳಿ ರಿಂಗ್ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಿ ಎರಡೇ ದಿನಗಳಲ್ಲಿ ಎಂಸಿಬಿ ಸ್ವಿಚ್‌ಗಳನ್ನೇ (MCB Switches) ಕದ್ದೊಯ್ದಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಸಂಸದ ಪ್ರತಾಪ್ ಸಿಂಹ (Pratap Simha), ಲೈಟು ಬೇಕು ಅಂದ್ರಿ, ಶ್ರಮಪಟ್ಟು ಹಾಕಿಸಿದೆ. ಎರಡೇ ದಿನಗಳಲ್ಲಿ ಸಾತಗಳ್ಳಿ ಬಳಿ ಕಳ್ಳರ ಕಾಟ ಶುರುವಾಗಿದೆ. ಎಂಸಿಬಿ ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ. ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ ಮತ್ತು ಸಿಸಿಟಿವಿ ಕ್ಯಾಮೆರಾ (CCTV Camera) ಅಳವಡಿಸಲು ಇಂಡಿಯನ್ ಬ್ಯಾಂಕ್ ನಿಂದ 5 ಲಕ್ಷ ಡಿಡಿ ಕೊಡಿಸಿದೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: HDK ಪ್ರಧಾನಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ CM: ಸಿಎಂ ಇಬ್ರಾಹಿಂ
Advertisement
Advertisement
ಕಗ್ಗತ್ತಲಲ್ಲಿ ಮುಳುಗಿದ್ದ ಮೈಸೂರಿನ 42.5 ಕಿ.ಮೀ. ರಿಂಗ್ ರಸ್ತೆಯ ಶೇ.50 ಭಾಗದ ದೀಪಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದ್ದರು. ಇದನ್ನೂ ಓದಿ: ದೇವಸ್ಥಾನದ ಆವರಣದ ಒಳಗಡೆ ಮೊಬೈಲ್, ಕ್ಯಾಮೆರಾಕ್ಕೆ ನಿರ್ಬಂಧ ವಿಧಿಸಿ: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
Advertisement
ರಿಂಗ್ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಕಾಮಗಾರಿಗೆ ತಗಲುವ ವೆಚ್ಚ 12 ಕೋಟಿ ರೂ.ಗಳನ್ನು ಮುಡಾದಿಂದ ಭರಿಸುವುದು ಹಾಗೂ ವಿದ್ಯುತ್ ದೀಪಗಳ ನಿರ್ವಹಣೆಯ ಹೊಣೆಯನ್ನು ನಗರ ಪಾಲಿಕೆ ವಹಿಸಿಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಅದರಂತೆ ಇದೀಗ ರಿಂಗ್ ರಸ್ತೆಯ ಶೇ.50ರಷ್ಟು ಭಾಗದಲ್ಲಿ ಎಲ್‌ಇಡಿ ಬಲ್ಬ್‌ಗಳು ಬೆಳಗುತ್ತಿದ್ದವು. ಇನ್ನುಳಿದಂತೆ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಿಂದ ಕೆಆರ್‌ಎಸ್ ರಸ್ತೆ, ಹಿನಕಲ್ ಜಂಕ್ಷನ್, ಬೋಗಾದಿ, ದಟ್ಟಗಳ್ಳಿ ಹಾಗೂ ಹೆಚ್.ಡಿ.ಕೋಟೆ ಜಂಕ್ಷನ್ ಮೂಲಕ ನಂಜನಗೂಡು ಜಂಕ್ಷನ್‌ವರೆಗಿನ ಎಲ್‌ಇಡಿ ಬಲ್ಬ್‌ಗಳು ಡಿಸೆಂಬರ್ 10ರೊಳಗೆ ಬೆಳಗಲಿವೆ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದರು.
ಶಿಥಿಲಾವಸ್ಥೆಯಲ್ಲಿದ್ದ 87 ವಿದ್ಯುತ್ ಕಂಬಗಳನ್ನು ಬದಲಿಸಿದ್ದು, ಕಂಟ್ರೋಲ್ ಯೂನಿಟ್ ಅಳವಡಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಡಿಸೆಂಬರ್ 10ರೊಳಗೆ ಅದು ಪೂರ್ಣಗೊಳ್ಳಲಿದೆ ಹೇಳಲಾಗಿತ್ತು. ಅಷ್ಟರಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ಮುಂದೆ ಕಳ್ಳರಿಗೆ ಹೆಡೆಮುರಿಕಟ್ಟಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಾಗಿ ಸಂಸದರು ಹೇಳಿದ್ದಾರೆ.