ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ದುಶ್ಚಟಗಳಿಗೆ ಕಡಿವಾಣ ಹಾಕಿ ಎಂದು ಖಾಸಗಿ ಶಾಲೆಗಳ ಒಕ್ಕೂಟ (Union of Private Schools) ಗೃಹಸಚಿವರಿಗೆ (Home Minister) ಪತ್ರ ಬರೆದಿದೆ.
ನಗರದಲ್ಲಿ ವಿದ್ಯಾರ್ಥಿಗಳು (Students) ಶಾಲಾ-ಕಾಲೇಜಿಗೆ ಚಕ್ಕರ್ ಹಾಕಿ ಪಬ್ (Pub) , ಬಾರ್ ಹಾಗೂ ಹುಕ್ಕಾಬಾರ್‌ಗಳಿಗೆ ಹಾಜರಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಅಪ್ರಾಪ್ತರಿಗೆ (Minors) ಪ್ರವೇಶ ಕೊಡುವ ಪಬ್, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಸಂಘಟನೆಯಿಂದ ಗೃಹಸಚಿವರಿಗೆ ಪತ್ರ (Letter) ಬರೆಯಲಾಗಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್
Advertisement
Advertisement
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಬ್, ರೆಸ್ಟ್ರೋ ಬಾರ್, ಹುಕ್ಕಾ ಬಾರ್‌ಗಳು ಮದ್ಯಪಾನ, ಧೂಮಪಾನ ಸೇವಿಸುವ ತಾಣಗಳಾಗಿವೆ ಎಂದು ಕೆಲ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಪೋಷಕರಿಂದ ಕ್ಯಾಮ್ಸ್‌ಗೆ ನಿರಂತರ ದೂರು ಬರುತ್ತಿತ್ತು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ಇನ್ನೂ ಬಚ್ಚ – ಮುತಾಲಿಕ್ ಕಿಡಿ
Advertisement
Advertisement
ಈ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟ ಗೃಹಸಚಿವರಿಗೆ ಪತ್ರ ಬರೆದಿದ್ದು, ಅಪ್ರಾಪ್ತ ವಯಸ್ಸಿನವರಿಗೆ ಮದ್ಯಪಾನ, ಧೂಮಪಾನ ಮಾರಾಟ ಮಾಡುವುದು ನಿಷೇಧ. ಹೀಗಿದ್ದರೂ ನಗರದ ಪಬ್, ಬಾರ್‌ಗಳಿಗೆ ಮಕ್ಕಳಿಗೆ ಎಂಟ್ರಿ ಸಿಗುತ್ತಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು
Web Stories