ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (kumta) ಪಟ್ಟಣದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು (Student) ಆಟೋದಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತಾಲೂಕಿನ ಕೋನಳ್ಳಿಯ ನಿವಾಸಿ ಅಖಿಲ್ ಈಶ್ವರ ಅಡಿಗುಂಡಿ (20) ಹಾಗೂ ಹೊನ್ನಾವರ ಕಡತೋಕಾದ ಹೆಬ್ಳೆಕೊಪ್ಪ ನಿವಾಸಿ ಸಮರ್ಥ ಜಟ್ಟಿ ಮುಕ್ರಿ (20) ಬಂಧಿತರು. ಈ ಇಬ್ಬರು ಸೇರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದರಿಂದಾಗಿ ವಿದ್ಯಾರ್ಥಿನಿ ಗರ್ಭಿಣಿ ಆಗಿದ್ದಾಳೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ
ವಿದ್ಯಾರ್ಥಿನಿಯು ಗರ್ಭಿಣಿಯಾಗಿರುವ ವಿಷಯ ತಿಳಿದ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಕಳುಹಿಸಿ ಮುಸ್ಲಿಮ್ ಯುವಕರ ತಲೆಕೆಡಿಸಿದ್ದ ಶಾರೀಕ್