– 10ಕ್ಕೂ ಹೆಚ್ಚು ಫೋನ್ ಬಳಸಿ, ಮಾರಾಟ
– ಮೊಬೈಲ್‌ನಲ್ಲಿ 500ಕ್ಕೂ ಹೆಚ್ಚು ಸೆಕ್ಸ್ ವೀಡಿಯೋ
ಮಂಗಳೂರು: ಉಗ್ರ ಶಾರೀಕ್‌ನ(Shariq) ಮುಖವಾಡಗಳು ಪೊಲೀಸ್ ತನಿಖೆಯಿಂದ ಕಳಚಿ ಬೀಳುತ್ತಿದೆ. ಇದೀಗ ಆತನ ಟೆರರ್ ಚಟುವಟಿಕೆಗಳಿಗೆ(Terror Activity) ಮುಸ್ಲಿಂ ಯುವಕರನ್ನು ಸೆಳೆಯಲು ಸೆಕ್ಸ್ ವೀಡಿಯೋವನ್ನು ಕಳುಹಿಸುತ್ತಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
Advertisement
ಸೆಕ್ಸ್ ವಿಡಿಯೋಗಳಿಂದಲೇ ಕರಾವಳಿಯ 40 ಕ್ಕೂ ಹೆಚ್ಚು ಮುಸ್ಲಿಂ(Muslim) ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ. ಈತನ ಮೊಬೈಲ್ ನಲ್ಲಿ ಬರೋಬ್ಬರಿ 500 ಕ್ಕೂ ಹೆಚ್ಚು ಸೆಕ್ಸ್ ವೀಡಿಯೋಗಳು ಪತ್ತೆಯಾಗಿದ್ದು ಇದನ್ನೇ ಅಸ್ತ್ರವನ್ನಾಗಿಸಿ ನೂರಾರು ಮುಸ್ಲಿಂ ಯುವಕರ ತಲೆ ಕೆಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಂಗ್ಳೂರಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ – ಪ್ರಸಿದ್ಧ ವೈದ್ಯೆ, ಯುವಕನ ವಿರುದ್ಧ ದೂರು ದಾಖಲು
Advertisement
Advertisement
ಶಾರೀಕ್ ಹತ್ತಕ್ಕೂ ಹೆಚ್ಚು ಪೋನ್‌ಗಳನ್ನು ಹೊಂದಿದ್ದು, ಅದನ್ನು ಬಳಕೆ ಮಾಡಿದ ನಂತರ ಮೊಬೈಲನ್ನು ಮಾರಾಟ ಮಾಡುತ್ತಿದ್ದ. ಹೀಗಾಗಿ ಯಾವುದೂ ಬೆಳಕಿಗೆ ಬರುತ್ತಿರಲಿಲ್ಲ. ಜೊತೆಗೆ ಮೊಬೈಲ್ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದಾಗ ಸಾಕಷ್ಟು ಮೊಬೈಲ್ ಸಂಖ್ಯೆಗಳು ಆತನಿಗೆ ಸಿಗುತ್ತಿತ್ತು. ಹೀಗೆ ಬೇರೆ ಬೇರೆ ಕಡೆಗಳಲ್ಲಿ ಸಿಕ್ಕ ನಂಬರ್ ನಲ್ಲಿ ಮುಸ್ಲಿಂ ಯುವಕರ ನಂಬರ್‌ಗಳನ್ನು ಖಚಿತಪಡಿಸಿ ಬಳಿಕ ಹಾಯ್ ಬಾಯ್ ಸಂದೇಶ ಕಳಿಸುತ್ತಿದ್ದ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ?
Advertisement
ಉತ್ತಮ ಪ್ರತಿಕ್ರಿಯೆ ಬಂದ ಯುವಕರಿಗೆ ಸೆಕ್ಸ್ ವೀಡಿಯೋಗಳನ್ನೂ ಕಳುಹಿಸುತ್ತಿದ್ದ. ಈ ರೀತಿ ಸಲುಗೆ ಬೆಳೆದ ನಂತರ ಅವರನ್ನು ತನ್ನ ಉಗ್ರ ಚಟುವಟಿಕೆಗಳಿಗೆ ತಲೆ ಕೆಡಿಸಿ ಭಯೋತ್ಪಾದನೆಯ ವೀಡಿಯೋಗಳನ್ನು ಕಳುಹಿಸುತ್ತಿದ್ದ. ಈತನ ಮಾತಿಗೆ ಮರುಳಾದ ಯುವಕರನ್ನು ಖುದ್ದು ಭೇಟಿಯಾಗಿ ಬಳಿಕ ಅವರಿಗೆ ತರಬೇತಿಯನ್ನು ನೀಡಿರುವುದು ಬೆಳಕಿಗೆ ಬಂದಿದೆ. ಕರಾವಳಿಯಲ್ಲೇ ಈತನಿಂದ 40 ಕ್ಕೂ ಹೆಚ್ಚು ಮುಸ್ಲಿಂ ಯುವಕರು ಐಸಿಸ್ ಮಾದರಿಯ ತರಬೇತಿ ಪಡೆದಿದ್ದಾರೆ ಅನ್ನೋದು ತನಿಖೆ ವೇಳೆ ಬಹಿರಂಗಗೊಂಡಿದೆ.
ಉಗ್ರ ಚಟುವಟಿಕೆಗಳಿಗೆ ಮರುಳಾದ ಯುವಕರಿಗೆ ಅರಣ್ಯ ಪ್ರದೇಶ, ನದಿ ತೀರದ ನಿರ್ಜನ ಪ್ರದೇಶಗಳಲ್ಲಿ ಟ್ರಯಲ್ ಬ್ಲಾಸ್ಟ್, ಬಾಂಬ್ ತಯಾರಿಕೆ, ಬಾಂಬ್ ಇಡುವ ಸ್ಥಳದ ಆಯ್ಕೆ, ಕೃತ್ಯ ನಡೆಸಿ ಪರಾರಿಯಾಗುವ ಪ್ಲಾನ್ ಸೇರಿದಂತೆ ಎಲ್ಲವನ್ನೂ ಐಸಿಸ್ ಉಗ್ರರಂತೆಯೇ ತರಬೇತಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಐಆರ್‌ಸಿ ಮೂಲ ಪತ್ತೆ: ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಮೂಲವನ್ನು ಎನ್‍ಐಎ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೌದಿ ಅರೇಬಿಯಾದಿಂದಲೇ ಡಾರ್ಕ್ ವೆಬ್ ಬಳಸಿ ಐಆರ್‌ಸಿ ಪತ್ರ ಅಪ್‍ಲೋಡ್ ಆಗಿದ್ದು, ಎಲ್ಲದಕ್ಕೂ ಅರಾಫತ್ ಆಲಿಯೇ ಮೂಲ ಕಾರಣ ಎನ್ನಲಾಗಿದೆ.