ಮಂಗಳೂರು: ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಗಂಭೀರ ಗಾಯಗೊಂಡಿರುವ ಯುವತಿ ಕುಟುಂಬಕ್ಕೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು 50 ಸಾವಿರ ರೂ. ಪರಿಹಾರ ನೀಡಿದ್ದಾರೆ.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಸಚಿವರು, ಯುವತಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ ವೈದ್ಯರು ಮತ್ತು ಯುವತಿ ಪೋಷಕರ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ತುರ್ತು ಚಿಕಿತ್ಸೆಗಾಗಿ ಆಕೆಯ ಕುಟುಂಬಕ್ಕೆ 50 ಸಾವಿರ ರೂ. ನೀಡಿದ್ದಾರೆ.
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯ ಯುವತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ವೈದ್ಯರ ಶ್ರಮದಿಂದ ಅಪಾಯದಿಂದ ಪಾರಾಗಿದ್ದಾರೆ. ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ ಸರ್ಕಾರ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
Advertisement
ಯುವತಿ ಹಲ್ಲೆಗೊಳಗಾಗುತ್ತಿದ್ದ ಸಮಯದಲ್ಲಿ ಉಳಿದವರು ನೋಡುತ್ತಾ ನಿಂತಿದ್ದರು. ಘಟನೆ ವೇಳೆ ತಡೆಯುವ ಬದಲು ವಿಡಿಯೋ ರೆಕಾರ್ಡ್ ಮಾಡಲು ನಿಂತಿದ್ದು ವಿಪರ್ಯಾಸ. ಆರೋಪಿ ಅಮಲು ಪದಾರ್ಥ ಸೇವಿಸಿ ಕೃತ್ಯ ಎಸಗಿರುವುದು ವೈದ್ಯರ ವರದಿಯಲ್ಲಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
Advertisement
ನಡೆದಿದ್ದೇನು?
ಆರೋಪಿ ಸುಶಾಂತ್ ಡ್ಯಾನ್ಸ್ ಕ್ಲಾಸಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ನೃತ್ಯ ಕಲಿಯಲು ಯುವತಿ ಬರುತ್ತಿದ್ದಳು. ಈ ವೇಳೆ ಸುಶಾಂತ್ ತನ್ನನ್ನು ಪ್ರೀತಿಸುವಂತೆ ಯುವತಿಗೆ ಒತ್ತಾಯಿಸುತ್ತಿದ್ದನು. ಆದರೆ ಯುವತಿ ಸುಶಾಂತ್‍ನನ್ನ ನಿರಾಕರಿಸಿದ್ದಳು. ಇತ್ತೀಚೆಗಷ್ಟೇ ಸುಶಾಂತ್ 20 ಸಾವಿರ ರೂ. ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬವನ್ನೂ ಆಚರಿಸಿದ್ದನು ಎನ್ನಲಾಗಿದೆ. ಇದಾದ ಮರುದಿನವೇ ಯುವತಿ, ಮಾನಸಿಕ ಕಿರುಕುಳದ ಆರೋಪ ಮಾಡಿ ಸುಶಾಂತ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಯುವಕನ ಮುಂದೆ ಕೈ ಚಾಚಿ ಬೇಡಿಕೊಂಡೆ- ಪ್ರೇಮಿಯಿಂದ ಇರಿತಕ್ಕೊಳಗಾದ ಸ್ನೇಹಿತೆಯನ್ನು ನರ್ಸ್ ರಕ್ಷಿಸಿದ ಕಥೆ ಓದಿ
ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸಿಟ್ಟಿಗೆದ್ದ ಆರೋಪಿ ಸುಶಾಂತ್ ಕೊಲೆಗೆ ಎರಡು ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದ. ಅದರಂತೆಯೇ ಶುಕ್ರವಾರ ಸಂಜೆ ಕಾಲೇಜಿನಿಂದ ಯುವತಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದೇರಳಕಟ್ಟೆ ಆಸ್ಪತ್ರೆಯ ಹಿಂಭಾಗದಲ್ಲಿ ಆಕೆಯನ್ನು ಅಡ್ಡಗಟ್ಟಿ 12 ಬಾರಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದನು. ಸುಶಾಂತ್ ಈ ಕೃತ್ಯ ಎಸಗುವ ಮುನ್ನ ಗಾಂಜಾ ಸೇವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇತ್ತ ಆರೋಪಿ ಸುಶಾಂತ್‍ನನ್ನು ಆಸ್ಪತ್ರೆಯಿಂದ ಜೈಲ್ ವಾರ್ಡಿಗೆ ಶಿಫ್ಟ್ ಮಾಡಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.