ಬೆಂಗಳೂರು: ಪೆನ್‌ಡ್ರೈವ್ ಪ್ರಕರಣದಲ್ಲಿ (Pendrive Case) ಪ್ರಜ್ವಲ್ (Prajwal Revanna) ಅವರ ಕುಟುಂಬದವರೇ ಶಾಸಕ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಸಿಎಂ ಅಥವಾ ಡಿಸಿಎಂ ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಚುನಾವಣೆ ಬಂದಾಗೆಲ್ಲ ಪಾಕಿಸ್ತಾನದ ವಿಚಾರ ಬಿಜೆಪಿ ಮಾತನಾಡುತ್ತದೆ. ಬಿಜೆಪಿಯವರು ಕೇವಲ ವಾಟ್ಸಪ್ ಫೇಸ್‌ಬುಕ್‌ನಲ್ಲಿ ಸ್ಟ್ರಾಂಗ್ ಲೀಡರ್‌ಗಳು. ಪೆನ್‌ಡ್ರೈವ್ ಪ್ರಕರಣದಲ್ಲಿ ಆರೋಪ ಮಾಡುತ್ತಿರುವುದು ಯಾರು? ತಪ್ಪಿತಸ್ಥರೇ ಎಲ್ಲದಕ್ಕೂ ಡಿಕೆಶಿ ರಾಜೀನಾಮೆ ನೀಡಬೇಕು, ಪರಮೇಶ್ವರ್ ರಾಜೀನಾಮೆ ನೀಡಬೇಕು ಅಂತಾರೆ. ಇದುವರೆಗೆ ಒಮ್ಮೆಯೂ ತಪ್ಪು ಮಾಡಿದವರು ರಾಜೀನಾಮೆ ನೀಡಬೇಕು ಅಂತಾ ಜೆಡಿಎಸ್ ನಾಯಕರು ಹೇಳುತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Prajwal Pendrive Case – ಜಾಮೀನು ಅರ್ಜಿ ವಜಾಗೊಂಡರೂ ಮೊದಲ ಐವರು ಆರೋಪಿಗಳ ಬಂಧನವಾಗಿಲ್ಲ
Advertisement
Advertisement
ಹೀನಿಯಸ್ ಕ್ರೈಂ, ಹಾರರ್ ಕ್ರೈಂ ನಮ್ಮ ಮನೆ ಮಗ ಮಾಡಿದ್ದಾನೆ. ಅದು ತಪ್ಪು ಅಂತಾ ಒಮ್ಮೆಯಾದರೂ ಜೆಡಿಎಸ್ ನಾಯಕರ ಬಾಯಲ್ಲಿ ಬಂದಿದೆಯಾ? ತಪ್ಪು ಮಾಡಿದ್ದಕ್ಕೆ ನಾವು ರಾಜೀನಾಮೆ ಕೊಡ್ತೇವೆ ಅಂತಾ ಒಮ್ಮೆಯಾದರೂ ಇವರ ಬಾಯಲ್ಲಿ ಬಂತಾ? ಇವರ ಮನೆಯಲ್ಲಿ ಎಂಎಲ್ಎ ಇದಾರೆ, ಎಂಪಿ ಇದಾರೆ, ಕೊಡಲಿ ಅವರ ಮನೆಯವರೇ ರಾಜೀನಾಮೆ. ಶಿವಕುಮಾರ್, ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
Advertisement
ನಿಮ್ಮ ಮನೆ ಮಗ ಎಲ್ಲಿದ್ದಾನೆ ನಿಮಗೇ ಗೊತ್ತಿಲ್ವಾ? ಕ್ರೈಂ ಮಾಡಿದ್ದು ನೀವು, ಶೂಟ್ ಮಾಡಿದ್ದು ನೀವು, ಅದನ್ನು ಕೊಟ್ಟಿದ್ದು ನಿಮ್ಮ ಡ್ರೈವರ್‌ಗೆ. ಡ್ರೈವರ್ ಕೊಟ್ಟಿದ್ದು ಬಿಜೆಪಿ ಅಧಿಕೃತ ಅಭ್ಯರ್ಥಿಗೆ. ಇದಕ್ಕೆ ಸೂತ್ರಧಾರರು ಹಲವಾರು ಬಿಜೆಪಿ ಶಾಸಕರು, ಬಿಜೆಪಿ ಮಾಜಿ ಶಾಸಕರು ಇದ್ದಾರೆ ಅಂತಾರೆ. ಅವರೆಲ್ಲರೂ ರಾಜೀನಾಮೆ ಕೊಡಬೇಕು. ಅದನ್ನು ಬಿಟ್ಟು ಎಸ್ಐಟಿ ಮೇಲೆ ಭರವಸೆ ಇಲ್ಲಾ ಅಂದ್ರೆ ಹೇಗೆ? ಸಿಬಿಐಗೆ ಯಾಕೆ ಕೊಡಬೇಕು? ನಿಮ್ಮ ಸಿಬಿಐ ಏನು ಸಾಧನೆ ಮಾಡಿದೆ ಎಂದು ಕೇಳಿದ್ದಾರೆ.
Advertisement
ಬಿಜೆಪಿಯವರು ನಾಚಿಕೆ ಇರಲಾರದವರು. ಈ ಪ್ರಕರಣ ಹೊರ ಬಂದ ಮೇಲೆ ಬಿಜೆಪಿಯವರು ಒಮ್ಮೆಯಾದರೂ ತಪ್ಪು ಅಂತಾ ಹೇಳಿದ್ರಾ? ಪ್ರಜ್ವಲ್ ಹುಡುಕೋದಕ್ಕೆ ಆಗ್ತಿಲ್ವಾ ಕೇಂದ್ರದ ಕೈಲಿ? ಕೇಂದ್ರ ಸರ್ಕಾರ ಏನು ಸಹಕಾರ ಮಾಡ್ತಿದೆ ಈ ಪ್ರಕರಣದಲ್ಲಿ? ಪಾಸ್‌ಪೋರ್ಟ್ ಕೂಡ ರದ್ದು ಮಾಡದೇ ಈಗ ಬಿಜೆಪಿ ಬಂದು ನಮಗೆ ಪ್ರವಚನ ನೀಡ್ತಿದ್ದಾರಾ? ಬಿಜೆಪಿ ಕೇಂದ್ರ ಸರ್ಕಾರ ಏನಾದ್ರೂ ಕಠಿಣ ಕ್ರಮ ಕೈಗೊಂಡಿದೆಯಾ? ನಮ್ಮ ರಾಜ್ಯ ಸರ್ಕಾರಕ್ಕೆ ಕೇಂದ್ರ ಏನು ಸಹಕಾರ ನೀಡ್ತಿದೆ? ರಾಜ್ಯ ಸರ್ಕಾರಕ್ಕೆ ಕೆಲವು ಇತಿಮಿತಿ ಇರುತ್ತದೆ. ಇದಕ್ಕೆ ಶಕ್ತಿ ಮೀರಿ ಕೆಲಸ ಮಾಡಲು ಕೇಂದ್ರದ ಸಹಕಾರ ಎಲ್ಲಿದೆ? ಅಮಿತ್ ಶಾ ಏನಾದ್ರೂ ಇಂಟರ್ ಪೋಲ್ ಒಂದಾದರೂ ಲೆಟರ್ ಬರೆದಿದ್ದಾರಾ? ಅವರು ಮಾತ್ರ ಮೈಮೇಲೆ ಎಣ್ಣೆ ಹಾಕಿಕೊಂಡು ಕೂತು ಕಾಂಗ್ರೆಸ್ ಮೇಲೆ ಎಲ್ಲವನ್ನೂ ಗೂಬೆ ಕೂರಿಸುತ್ತಿದ್ದಾರೆ. ಪ್ರಜ್ವಲ್ ಆಂಧ್ರದಲ್ಲಿ ಡೆಲ್ಲಿಯಲ್ಲಿ ಇದ್ದರೆ ನಾವು ಕರೆದುಕೊಂಡು ಬರಬಹುದಿತ್ತು. ಅಲ್ಲೆಲ್ಲೋ ಜರ್ಮನಿ ಫ್ರ್ಯಾಂಕ್ ಫರ್ಡ್‌ನಲ್ಲಿ ಇದ್ದರೆ ನಮಗೆ ಕೇಂದ್ರದ ಅನುಮೋದನೆ ಬೇಕಲ್ಲ. ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಜಾಯಿಂಟ್ ಆಪರೇಷನ್ ಮಾಡಬಹುದಲ್ವಾ? ಅಮಿತ್ ಶಾ, ನಡ್ಡಾ ಎಲ್ಲರೂ ಹುಬ್ಬಳ್ಳಿ ಕೇಸ್‌ನಲ್ಲಿ ಮನೆಗೆ ಹೋಗಿ ಭೇಟಿ ನೀಡ್ತಾರೆ. ಆದರೆ ಹಾಸನಕ್ಕೆ ಯಾಕೆ ಕಾಲಿಡ್ತಾ ಇಲ್ಲ? ಹಾಸನಕ್ಕೆ ಹೋದರೆ ಕಲ್ಲಿನಲ್ಲಿ ಹೊಡೆಯುತ್ತಾರೆ. ಇವರಿಗೆ ಇಂಥವರ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ, ಹಾಸನಕ್ಕೆ ಹೋಗಿ ಸಂತ್ರಸ್ತೆಯರಿಗೆ ಸಂತಾಪ ಹೇಳಬೇಕಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇವರಾಜೇಗೌಡ, ಪ್ರೀತಂ ಗೌಡ ಆಪ್ತರ ಮನೆ ಸೇರಿದಂತೆ ಹಾಸನದ 6 ಕಡೆ ಎಸ್‌ಐಟಿ ದಾಳಿ
ಹುಬ್ಬಳ್ಳಿ ಪ್ರಕರಣದಲ್ಲಿ ಇರುವ ಆಸಕ್ತಿ ಹಾಸನದ ಪ್ರಕರಣದಲ್ಲಿ ಯಾಕಿಲ್ಲ? ವಿಜಯೇಂದ್ರ ಎಲ್ರೀ ನಾಪತ್ತೆ ಆಗಿದ್ದೀರಾ? ಅಶೋಕಣ್ಣ ನೀವೆಲ್ಲಿ ಗಾಯಬ್ ಆಗಿದ್ದೀರಾ? ಯಾಕೆ ಇದರ ಬಗ್ಗೆ ಚರ್ಚೆ ಇಲ್ಲ. ಮಾತೆತ್ತಿದರೆ ಮಹಾ ನಾಯಕರು ತಿಮಿಂಗಿಲ ಅಂತಿದ್ದೀರಿ. ಯಾಕೆ ನಿಮ್ಮ ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ನಾಯಕರು ಮಾತಾಡ್ತಾ ಇಲ್ಲ? ನಿಮಗೆ ನೈತಿಕತೆ ಇದ್ದರೆ ಯಾಕೆ ಸೀಟು ಬಿಟ್ಟುಕೊಟ್ಟಿರಿ ಜೆಡಿಎಸ್‌ಗೆ? ಹುಬ್ಬಳ್ಳಿ ನಿನ್ನೆ ಮರ್ಡರ್ ನಾ ಬಿಜೆಪಿ ಯಾಕೆ ದೊಡ್ಡ ಮಟ್ಟದಲ್ಲಿ ತೆಗೆದುಕೊಳ್ತಿಲ್ಲ? ಯಾಕೆ ಬಿಜೆಪಿ ಮಡಿಕೇರಿ ಪ್ರಕರಣ, ಹಾಸನ ಪ್ರಕರಣ ಬಗ್ಗೆ ಮಾತಾಡ್ತಿಲ್ಲ? ಇವರಿಗೆ ರಾಜಕೀಯ ಲಾಭ ಎಲ್ಲಿದೆ, ಅಲ್ಲಿ ಪ್ರತಿಭಟನೆ ಮಾಡ್ತಾರೆ. ಎಲ್ಲ ರಾಜ್ಯ ರಾಷ್ಟ್ರೀಯ ನಾಯಕರು ಆಗ ಹುಬ್ಬಳ್ಳಿಗೆ ಬಂದ್ರು. ಕೋಮು ಬಣ್ಣ ಹಾಕಲು ಬಂದ್ರೆ ಮಾತ್ರ ಇವರು ಮಾತನಾಡ್ತಾರೆ. ಕೊಡಗೂ ಪ್ರಕರಣ ವೈಯಕ್ತಿಕ ಅಂತಾರೆ ಬಿಜೆಪಿಯವರು. ಹುಬ್ಬಳ್ಳಿ ಈ ಪ್ರಕರಣವೂ ವೈಯಕ್ತಿಕ ಅಂತಾರೆ. ಇವರಿಗೆ ರಾಜಕೀಯ ಲಾಭ ಇಲ್ಲದಿದ್ದರೆ ವೈಯಕ್ತಿಕ, ಲಾಭ ಇದ್ದರೆ ಸಾರ್ವಜನಿಕ. ಯಾವಾಗ ಬೇಕು ಆವಾಗ ಎನ್ಐಎ ಬೇಕು. ಇಲ್ಲದಿದ್ದರೆ ಎಸ್ಐಟಿ ಮೇಲೆ ಗೂಬೆ ಕೂರಿಸುವುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ರೈಂ ಸಂಖ್ಯೆ ಹೆಚ್ಚಳ ಬಿಜೆಪಿಯವರಿಂದಲೇ ಆಗಿರಬೇಕು. ಹೆಚ್ಚಿನ ಕ್ರಿಮಿನಲ್ಸ್ ಬಿಜೆಪಿಯವರೇ, ಅವರ ಕಡೆಯವರೇ ಮಾಡ್ತಿರೋದು. ಕೆಲವು ಪೊಲೀಸ್ ಸ್ಟೇಷನ್‌ಗಳನ್ನು ಕುಮಾರಕೃಪದಿಂದಲೇ ನಡೆಸುತ್ತಿದ್ದರು ಇವರು. ಸ್ಯಾಂಟ್ರೋ ಕೇಸ್ ಮರೆತು ಹೋದ್ರಾ ಬಿಜೆಪಿಯವರು? ಇವರ ತರಹ ಕಮಿಷನ್ ಸರ್ಕಾರ ನಡೆಸುತ್ತಿಲ್ಲ ನಾವು ಎಂದು ವಾಗ್ದಾಳಿ ನಡೆಸಿದ್ದಾರೆ.