ಅಮಿತ್‌ ಶಾನೇ ದೇವರಾಜೇಗೌಡರ ಬಳಿ ಹೇಳಿಸಿರಬಹುದು: ಪ್ರಿಯಾಂಕ್‌ ಖರ್ಗೆ ತಿರುಗೇಟು

Public TV
1 Min Read
DEVARAJE GOWDA PRIYANK KHARGE

ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣದ ಹಿಂದೆ ನಾಲ್ವರು ಸಚಿವರ ಕಮಿಟಿಯನ್ನು ಡಿ.ಕೆ ಶಿವಕುಮಾರ್‌ (DK Shivakumar) ಅವರು ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅಲ್ಲಗೆಳೆದಿದ್ದಾರೆ.

ಈ ಕುರಿತು ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಸಚಿವರು, ದೇವರಾಜೇಗೌಡ (Devaraje Gowda) ಅವರ ಆರೋಪಗಳೆಲ್ಲ ಸುಳ್ಳು. ಯಾರಾದರೂ ಜಾಸ್ತಿ ಮಾತಾಡಿದ್ರೆ ಅವರ ಮೇಲೆ ಗೂಬೆ ಕೂರಿಸೋದು ಬಿಜೆಪಿಯ ಹಳೆ ಚಾಳಿ. ಈ ಹಿಂದೆ ಬಿಟ್‌ ಕಾಯಿನ್‌ನಲ್ಲಿ, ಪಿಎಸ್‌ಐ ಹಗರಣ, ಗಂಗಾ ಕಲ್ಯಾಣ ಹಗರಣದಲ್ಲಿ ಪ್ರಿಕಾಂಕ್‌ ಖರ್ಗೆ ಪಾಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಇದನ್ನೂ ಹಂಗೇ ಹೇಳಿರೋದು. ಯಾರಿಗೆ ಗೊತ್ತು ಮೇಲಿಂದಲೇ ಹೇಳಿಸಿರಬಹುದು ಎಂದು ವಾಗ್ದಾಳಿ ನಡೆಸಿದರು.

ದೇವರಾಜೇಗೌಡ ಅವರೇ ಅಮಿತ್‌ ಶಾ (Amitshah) ಅವರ ನಿರ್ದೇಶನದ ಮೇರೆಗೆ ನಾನು ಇದನ್ನೆಲ್ಲಾ ಮಾಡಿರುವುದು ಅಂತಾ ಈಗಾಗಲೇ ಹೇಳಿದ್ದಾರೆ. ಇದನ್ನೂ ಅವರೇ ಹೇಳಿಸಿರಬಹುದು. ಆದರೆ ಇದನ್ನು ಕೋರ್ಟ್‌ ಆವರಣದಲ್ಲಿ ಹೇಳುವ ಅವಶ್ಯಕತೆ ಏನಿದೆ?. ಲಾಯರ್ ಆಗಿರುವ ನೀವು ಬಂದು ಎಲ್ಲಾ ದಾಖಲೆಗಳನ್ನು ನೀಡಿ. ನಿಮಗೆ ಸಂಪೂರ್ಣವಾಗಿ ಕಾನೂನಿನ ಅರಿವಿದೆ. ಸಚಿವರಾಗಿರುವ ನಮಗೆ ಬೇರೆ ಕೆಲಸ ಇಲ್ವಾ?. ರಾಜ್ಯದಲ್ಲಿ ಭೀಕರ ಬರಗಾಲವಿದೆ ಎಂದರು.

d.k.shivakumar devarajegowda

ನೂರು ಕೋಟಿ ಆಫರ್‌ ಕೊಟ್ಟು 5 ಕೋಟಿ ಕ್ಯಾಶ್‌ ಕೊಡಲು ಡಿಕೆಶಿ ಬಂದಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಇದನ್ನು ಅಮಿತ್‌ ಶಾ ಅವರಿಗೆ ಹೇಳಬೇಕಿತ್ತು. ನೋಡಿ ಸರ್‌ 100 ಕೋಟಿ ಕೊಡುತ್ತಾರೆ. ಐಟಿ-ಇಡಿ ದಾಳಿ ಮಾಡಿಸಿ ಅಂತಾ ಹೇಳಬೇಕಿತ್ತು ಎಂದರು. ಇದನ್ನೂ ಓದಿ: ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್: ಹೊಸ ಬಾಂಬ್‌ ಸಿಡಿಸಿದ ವಕೀಲ ದೇವರಾಜೇಗೌಡ

ವಿಚಾರಣೆಗೆ ಸಿದ್ಧರಿದ್ದೀರಾ ಎಂಬ ಪ್ರಶ್ನೆ ಉತ್ತರಿಸಿದ ಖರ್ಗೆ, ಪಿಎಸ್‌ಐ ಹಗರಣದ ಸಂದರ್ಭದಲ್ಲಿ ಸಿಸಿಬಿಯವರೇ ನೋಟಿಸ್‌ ಕೊಟ್ಟಾಗ ಹೆದರಲಿಲ್ಲ. ಈವಾಗ ಹೆದರುವ ಅವಶ್ಯತೆ ಏನಿದೆ?. ದಾಖಲೆಗಳು ಕೊಟ್ಟು ನನ್ನದು ತಪ್ಪಿದೆ ಅಂದ್ರೆ ನಾನು ವಿಚಾರಣೆಗೆ ಹೋಗಲೇಬೇಕು, ಹೋಗ್ತೀನಿ ಎಂದು ಹೇಳಿದರು.

Share This Article