‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ

Advertisements

ಗಾಗಲೆ ರಾಜ್ಯದ ಮೂವರು ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರ ಸ್ವಾಮಿ, ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ‘ಪರಿಮಳ ಡಿಸೋಜಾ’ ಚಲನಚಿತ್ರದ ಸಿನೆಮಾ ಪೋಸ್ಟರ್ ಬಿಡುಗಡೆ ಮಾಡಿದ್ದು , ಈಗ ಪರಿಮಳ ಡಿಸೋಜಾ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ  ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್  ಬಿಡುಗಡೆ ಮಾಡಿದ್ದಾರೆ.

Advertisements

ಸಸ್ಪೆನ್ಸ್ ಥ್ರಿಲ್ಲರ್ ಆಕ್ಸನ್ ಪ್ಯಾಮಿಲಿ ಸೆಂಟಿಮೆಂಟ್ ಕಥಾವಸ್ತುವನ್ನು ಹೊಂದಿರುವ ಬಹುನಿರೀಕ್ಷೇಯ ಪರಿಮಳ ಡಿಸೋಜಾ ಕನ್ನಡ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ  ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್  ಮಂಗಳವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿ “ ಪರಿಮಳ ಡಿಸೋಜಾ” ಚಲನಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

Advertisements

ಈ ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ , ವಿನೋದ್ ಶೇಷಾದ್ರಿ , ಪೂಜ ರಾಮಚಂದ್ರ, ರೋಹಿಣಿ ಜಗನಾಥ್, ಚಂದನ ಶ್ರೀನಿವಾಸ್, ಮೀಸೆ ಆಂಜನಪ್ಪ, ಶಿವಕುಮಾರ್ ಆರಾಧ್ಯ, ನಾಗಮಂಗಲ ಜಯರಾಮ್ ಸುನೀಲ್ ಮೋಹಿತೆ, ಉಗ್ರಂ ರೆಡ್ಡಿ ಮುಂತಾದ ನೂರಕ್ಕು ಹೆಚ್ಚು ಕಲಾವಿಧರು ಅಭಿನಯಿಸಿರುವ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಡಾ.ಗಿರಿಧರ್ ಹೆಚ್ ಟಿ ,ಸಿನೇಮಾಟೊಗ್ರಪಿಯನ್ನು ಕೆ ರಾಮ್, ಸಂಕಲನ ಸಂಜೀವ್ ರೆಡ್ಡಿ, ಸಂಗೀತವನ್ನು ಕ್ರಿಸ್ಟೋಫರ್ ಜೇಸನ್ ಮಾಡಿದ್ದಾರೆ. ನಿರ್ಮಾಪಕರು ವಿನೋದ್ ಶೇಷಾದ್ರಿ ಅವರು ವಿಲೇಜ್ ರೋಡ್ ಫಿಲಂಸ್ ಲಾಂಚನದಲ್ಲಿ ನಿರ್ಮಿಸಿದ್ದಾರೆ.

Live Tv

Advertisements
Exit mobile version