ಅಯೋಗ್ಯ, ಮದಗಜ ಸಿನಿಮಾದ ಪ್ರತಿಭಾನ್ವಿತ ನಿರ್ದೇಶಕ ಎಸ್.ಮಹೇಶ್ ಕುಮಾರ್ (S. Mahesh Kumar) ಇದೀಗ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಹೊಸ ವಿಚಾರವೊಂದು ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಅಭಿಷೇಕ್ ಮುಂಬರುವ ಸಿನಿಮಾಗೆ ರಾಣಾ ದಗ್ಗುಭಾಟಿ(Rana Daggubati) ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗುತ್ತಿದೆ.
Advertisement
ಅಭಿಷೇಕ್ (Abhishek Ambareesh) ಮತ್ತು ಮಹೇಶ್ ಕುಮಾರ್ ಕಾಂಬಿನೇಷನ್ ಹೊಸ ಸಿನಿಮಾಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ಅಭಿಷೇಕ್, ಮಹೇಶ್ ಜೊತೆಗಿನ ರಾಣಾ ದಗ್ಗುಭಾಟಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಅಭಿಷೇಕ್ ಮುಂದಿನ ಸಿನಿಮಾಗೆ ರಾಣಾ ಬರುತ್ತಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಸ್ಟಾರ್ ನಟನ ಮಗಳ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ
Advertisement
View this post on Instagram
Advertisement
`ಕೆಜಿಎಫ್ 2′, ಕಾಂತಾರ ಸಿನಿಮಾದ ನಂತರ ಕನ್ನಡದ ಮಾರುಕಟ್ಟೆ ದೊಡ್ಡದಾಗಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಪರಭಾಷೆಯ ಸ್ಟಾರ್ಸ್ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಣಾ ಎಂಟ್ರಿ ನೆಟ್ಟಿಗರಿಗೆ ಕುತೂಹಲ ಮೂಡಿಸಿದೆ.
Advertisement
ಇತ್ತೀಚೆಗೆ ರಾಣಾ ದಗ್ಗುಭಾಟಿ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. ಈಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಅಭಿಷೇಕ್ ನಟನೆಯ ಐತಿಹಾಸಿಕ ಸಿನಿಮಾಗೆ ರಾಣಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಶೂಟಿಂಗ್ ಏಪ್ರಿಲ್‌ನಿಂದ ಶುರುವಾಗಲಿದೆ. ಅಷ್ಟಕ್ಕೂ ಈ ಚಿತ್ರಕ್ಕೆ ರಾಣಾ ಎಂಟ್ರಿಯ ಸುದ್ದಿ ನಿಜಾನಾ, ಅಥವಾ ಇದು ಜಸ್ಟ್ ಭೇಟಿಗಷ್ಟೇ ಸೀಮಿತನಾ ಎಂಬುದನ್ನ ಮುಂದಿನ ದಿನಗಳವೆರೆಗೂ ಕಾದುನೋಡಬೇಕಿದೆ.