ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಳಿಗಾಗಿ ಜನರ ಮುಂದೆ ಹೋಗಿ ಏಕೆ ರಾಜಕೀಯವಾಗಿ (Politics) ಬೆತ್ತಲಾಗುತ್ತೀರಿ? ಸರ್ಕಾರ (Government) ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ (BJP) ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ ಎಂದು ಸಚಿವ ಸುಧಾಕರ್ (K Sudhakar) ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
Advertisement
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿಯಲ್ಲಿ ಬಿಜೆಪಿ (BJP) ಅವ್ಯವಹಾರ ನಡೆಸಿದೆ ಎಂಬ ಕಾಂಗ್ರೆಸ್ (Congress) ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?- ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ
Advertisement
Advertisement
ಕಾಂಗ್ರೆಸ್ ನವರಿಗೆ ಚುನಾವಣೆ (Election) ಹತ್ತಿರ ಆಗ್ತಿದಂತೆ ಸುಳ್ಳು ಅಪಾದನೆ ಮಾಡೋದು ಕರಗತ ಮಾಡಿಕೊಂಡಿದ್ದಾರೆ. 130 ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ (Caste Survey) ನಡೆಸಿದ್ರಲ್ಲಾ, ಆಗ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಎಲ್ಲ ಮಾಹಿತಿ ಹಂಚಿಕೆ ಮಾಡಲಿಲ್ವಾ? ಆದರೂ ಏಕೆ ಅಧಿಕೃತವಾಗಿ ಜಾತಿ ಸಮೀಕ್ಷೆ ರಿಪೋರ್ಟ್ ಹೊರಗೆ ತರಲಿಲ್ಲ. ಇದರ ಹೊಣೆಗಾರಿಕೆ ಕಾಂಗ್ರೆಸ್‌ನವರು ಹೊರ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕುಡಿದು ತೂರಾಡುತ್ತಾ ಮಧ್ಯದ ಬೆರಳು ತೋರಿಸಿದ ನಟಿ ಆಶಿಕಾ: ವಿಡಿಯೋ ಇದೆ
Advertisement
ಸರ್ಕಾರದ ಖಜಾನೆಯಿಂದ 130 ಕೋಟಿ ಖರ್ಚು ಮಾಡಿ ಕಾಂತರಾಜು ಅಧ್ಯಕ್ಷತೆಯಲ್ಲಿ ಜಾತಿ ಸಮೀಕ್ಷೆ ಮಾಡಿಸಿದ್ರು. ಅದನ್ನ ಅಧಿಕೃತವಾಗಿ ಸ್ವೀಕಾರ ಮಾಡಲಿಲ್ಲ. ಬೇಕಾದ ಕಾಂಗ್ರೆಸ್ ಕ್ಯಾಂಡಿಡೇಟ್ ಗಳಿಗೆ ಮಾಹಿತಿ ಸೋರಿಕೆ ಮಾಡಿದ್ರು. ಇನ್ನೂ ಚುನಾವಣಾ ಆಯೋಗ ಮತದಾರರ ಸಮೀಕ್ಷಗೆ ಕೊಡೋದು ಸ್ಥಳೀಯವಾಗಿ ನಡೆದುಕೊಂಡು ಬಂದಿದೆ. ಒಂದು ವೇಳೆ ಎನ್‌ಜಿಒಗಳು ಕಾನೂನು ಮೀರಿ ನಡೆದುಕೊಂಡ್ರೆ ಆ ಸಂಸ್ಥೆ ಮೇಲೆ ಕಾನೂನು ಕ್ರಮ ಆಗುತ್ತದೆ. ಇದನ್ನ ಸರಳವಾಗಿ ಸ್ಪಷ್ಟವಾಗಿ ಸಿಎಂ ಹೇಳಿದ್ದಾರೆ. ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ಸಿಎಂ ಹೇಳಿದ್ರಾ ಎನ್‌ಜಿಒಗೆ (NGO) ಕೊಡೋಕೆ? ಹಾಗಿದ್ರೆ ವಿರೋಧ ಪಕ್ಷದವರು ಎಷ್ಟು ಸಲ ರಾಜೀನಾಮೆ ಕೊಡಬೇಕಿತ್ತು. ಜಾತಿ ಸಮೀಕ್ಷೆ ಸೋರಿಕೆ ಮಾಡಿರೋದು ಬಹುದೊಡ್ಡ ಅಪರಾಧ. ಯಾವುದಾದರೂ ತಾರ್ಕಿಕ ವಿಷಯದ ಮೂಲಕ ಚರ್ಚೆಗೆ ಬನ್ನಿ ಸವಾಲ್ ಹಾಕಿದ್ದಾರೆ.