ಬೆಂಗಳೂರು: ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಯ ವಿಚಾರವಾಗಿ ಸಲಹೆ ಕೊಡಲು ಆಗಸ್ಟ್ 2ರಂದು ದೆಹಲಿಯಲ್ಲಿ ವರಿಷ್ಠರ ಸಭೆ ಇದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ದೆಹಲಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಸಭೆಯ ಅಜೆಂಡಾ ಏನು ಅಂತ ನನಗೆ ಗೊತ್ತಿಲ್ಲ. ಸಹಜವಾಗಿ ಇಂತಹ ಸಭೆಗಳನ್ನ ಹಿಂದೆಯೂ ಮಾಡಿದ್ದಾರೆ. ಹಿಂದೆ ಎಸ್.ಎಂ ಕೃಷ್ಣ ಅವರು ಸಿಎಂ ಇದ್ದಾಗ ನಾನು ಅವತ್ತು ಸಚಿವ ಆಗಿದ್ದಾಗಲೂ ಇಂತಹ ಸಭೆ ಮಾಡಿ ಜನಪರ ಆಡಳಿತ ಕೊಡೋಕೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಈ ಸಭೆಗೆ ಹಿಂದೆ ನಾವು ರಿಪೋರ್ಟ್ ಕೂಡಾ ಕೊಡ್ತಿದ್ದೇವು. ಲೋಕಸಭೆ, ಪಕ್ಷ ಸಂಘಟನೆ ವಿಚಾರ ಇರಬಹುದು ಅಂತಾ ತಿಳಿಸಿದರು. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ
ಸಚಿವರ ಮೌಲ್ಯಮಾಪನ ಏನು ಮಾಡೊಲ್ಲ. ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಅಂತ ಸಲಹೆ ಕೊಡಬಹುದು. ಕೆಪಿಸಿಸಿ ಪುನರ್ ರಚನೆ ಬಗ್ಗೆಯೂ ನನಗೆ ಗೊತ್ತಿಲ್ಲ. ಸಮನ್ವಯ ಸಮಿತ ರಚನೆ ಬಗ್ಗೆಯೂ ಗೊತ್ತಿಲ್ಲ. ನನಗೇನು ಗೊತ್ತಿಲ್ಲ. ನಾಳೆ ಸಭೆಯ ಬಳಿಕವೇ ಎಲ್ಲವೂ ಗೊತ್ತಾಗಲಿದೆ ಅಂತ ತಿಳಿಸಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ
Web Stories