ಬೆಂಗಳೂರು: ಭೂ ಗ್ಯಾರಂಟಿ (Land Gurantee) ಯೋಜನೆಯಡಿ ಇ-ಸ್ವತ್ತು 2.0ಗೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಚಾಲನೆ ನೀಡಿದರು.
ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮೊದಲು ಇ-ಸ್ವತ್ತು ನೀಡುವ ಅಭಿಯಾನ ಇದಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಚುನಾವಣೆ ಮುನ್ನ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಗ್ರಾಮೀಣಾ ಭಾಗದ ಬಹುದಿನಗಳ ಬೇಡಿಕೆ. ಅವರದ್ದೇ ಸ್ವತ್ತು ಆಗಿದ್ರು ಅವರ ಬಳಿ ದಾಖಲಾತಿ ಇರಲಿಲ್ಲ. ಅವರಿಗಾಗಿ ಇ-ಸ್ವತ್ತು ಅಭಿಯಾನ ಮಾಡಿದ್ದೇವೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸ ಇದ್ದರು ದಾಖಲಾತಿ ಅವರಿಗೆ ಇರಲಿಲ್ಲ. ಹಲವು ಕಾರಣಗಳಿಂದ ದಾಖಲಾತಿ ಇರಲಿಲ್ಲ. ಇದಕ್ಕಾಗಿ ಒಂದು ಸಮಿತಿ ಮಾಡಿದ್ದೆ. 5 ಜನರ ಸದಸ್ಯರ ಸಮಿತಿ ಎಲ್ಲರ ಅಭಿಪ್ರಾಯ ಪಡೆದು ವರದಿ ಕೊಟ್ಟಿದ್ದರು. ವರದಿ ಪರಿಶೀಲನೆ ಬಳಿಕ ಈಗ ಇದ್ದ ನಿಯಮ ಬದಲಾವಣೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಮಡಿಕೇರಿ | ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾವತಿಯಲ್ಲಿ ಗೋಲ್ಮಾಲ್ ಆರೋಪ; ಮೂವರು ಸಿಬ್ಬಂದಿ ವಿರುದ್ಧ ದೂರು
ಗ್ರಾಮೀಣ ಭಾಗದ ಜನರಿಗೆ ಸ್ಪಷ್ಟವಾದ ಭೂ ದಾಖಲೆ ಕೊಡಬೇಕು. ಹೀಗಾಗಿ ಇ-ಸ್ವತ್ತು ಅಭಿಯಾನ ಮಾಡಿದ್ದೇವೆ. ನಮ್ಮ ಪಂಚತಂತ್ರದಲ್ಲಿ 1,50,69,90 ರೂ. ಆಸ್ತಿ ಇವೆ. ಇದರಲ್ಲಿ 11ಂ ಕೊಟ್ಟಿದ್ದು, 42,92,484 ಇ-ಸ್ವತ್ತು ವಿತರಣೆ ಮಾಡಲಾಗಿದೆ. ಫಾರಂ 11 ಕೊಟ್ಟಿದ್ದು 10,16,730 ಕೊಡಲಾಗಿದೆ. ಎರಡು ಸೇರಿ 53,09,223 ಜನರಿಗೆ ಇ-ಸ್ವತ್ತು ಕೊಡಲಾಗಿದೆ. ಬಾಕಿ 97,59,867 ಖಾತೆ ಇ-ಸ್ವತ್ತು ಕೊಡಬೇಕಿದೆ ಎಂದು ಮಾಹಿತಿ ಕೊಟ್ಟರು.
ಈ ವರ್ಷದ ಅಂತ್ಯಕ್ಕೆ ಡಿಸೆಂಬರ್ 31ರೊಳಗೆ 8 ಲಕ್ಷ ಆಸ್ತಿಗೆ ಇ-ಸ್ವತ್ತು ನೀಡಲಾಗುತ್ತದೆ. ಅರ್ಜಿ ಕೊಟ್ಟ 22 ದಿನಗಳ ಪರಿಶೀಲನೆ ಬಳಿಕ ಇ ಖಾತೆ ಆಗಲಿದೆ. ಪ್ರತಿ ಪಂಚಾಯತಿಗೆ ಗುರಿ ನಿಗದಿ ಮಾಡಲಾಗಿದೆ. ಕಂದಾಯ ಭೂಮಿಯಲ್ಲಿ ಮನೆ ಕಟ್ಟಿರೋರಿಗೆ ಖಾತೆ ಮಾಡಿಕೊಡ್ತೀವಿ. ಮೊದಲ ಹಂತದಲ್ಲಿ ಬಿ ಕರಾಬ್ ಇಲ್ಲದ ಕಂದಾಯ ಭೂಮಿಗೆ ಇ ಖಾತೆ ಕೊಡುತ್ತೇವೆ. ಮುಂದಿನ ವರ್ಷ ಅಂತ್ಯದ ಒಳಗೆ ಎಲ್ಲಾ ಖಾತೆಗೆ ಇ ಸ್ವತ್ತು ಕೊಡುವ ಗುರಿ ಹಾಕಿದ್ದೇವೆ. ಒಂದು ಬಾರಿ ಪರಿಹಾರ ಅಂತ ಮಾಡ್ತಾ ಇದ್ದೇವೆ. ನವೆಂಬರ್ 2 ಪ್ರಕ್ರಿಯೆ ಶುರು ಮಾಡಲಾಗಿದೆ. 2025ರ ಏಪ್ರಿಲ್ 7ರೊಳಗೆ ವಿದ್ಯುತ್ ಬಿಲ್ ಇದ್ದವರಿಗೆ ಇ ಖಾತೆ ಕೊಡ್ತೀವಿ. ಸೇಲ್ ಡೀಡ್ ರಿಯಾಯಿತಿ ಕೊಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ‘ಸೆಂಚುರಿ’ ಬಾರಿಸಿದ ಬಿಳಿಜೋಳ!
ಎರಡನೇ ಹಂತದಲ್ಲಿ ಸರ್ಕಾರದ ಯೋಜನೆಯ ಹಕ್ಕು ಪತ್ರಗಳಿಗೂ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಇ-ಖಾತೆ ಕೊಡ್ತೀವಿ. ಮಲೆನಾಡು ಭಾಗದ ಕಣಮನೆ, ಮನೆದಳಕ್ಕೂ ಇ ಖಾತೆ ಕೊಡ್ತೀವಿ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ, ಕೃಷಿ ಉದ್ದೇಶಕ್ಕಾಗಿ ಮನೆ ಕೊಟ್ಟಿರೋರಿಗೆ ಇ-ಖಾತೆ ಕೊಡ್ತೀವಿ. ಗ್ರಾಮ ಪಂಚಾಯತಿಯಲ್ಲಿ ಗ್ರಾಮಠಾಣಾ ವ್ಯಾಪ್ತಿ ಸಿಬ್ಬಂದಿಗಳು ಹೋಗಿ ದಾಖಲಾತಿ ಸಂಗ್ರಹ ಮಾಡಬೇಕು. ಮೊದಲು ಗ್ರಾಮಾಠಾಣ ಆಸ್ತಿಗಳಿಗೆ ಕೊಡ್ತೀವಿ. ಬಳಿಕ ಕಂದಾಯ ಜಮೀನಿಗೆ ಕೊಡ್ತೀವಿ ಎಂದು ಹೇಳಿದರು.
ಕಂದಾಯ ಜಮೀನಿಗೂ ಕೊಡ್ತೀವಿ. ಬಿ-ಕರಾಬ್ ಜಮೀನು ಸಮೀಕ್ಷೆ ಮಾಡಬೇಕು. ಕಂದಾಯ ಇಲಾಖೆ ಜೊತೆ ಮಾತಾಡಬೇಕು. ಸಿಎಂ, ಡಿಸಿಎಂ ಜೊತೆ ಮಾತಾಡಿ ಪರಿಹಾರ ಕೊಡ್ತೀವಿ. ಕಂದಾಯ ಜಮೀನಿನಲ್ಲಿ ಮನೆ ಕೊಟ್ಟಿರೋರಿಗೆ ಇ-ಖಾತೆ ಕೊಡ್ತೀವಿ. ಬಿ ಕರಾಬ್ ಬಿಟ್ಟು ಇರೋ ಕಂದಾಯ ಜಮೀನಿಗೆ ಇ ಖಾತೆಗೆ ಕೊಡಲು ಸೂಚನೆ ನೀಡಿದ್ದೇವೆ. ಆದಷ್ಟು ಬೇಗ ಇದನ್ನೂ ಮಾಡ್ತೀವಿ ಅಂತ ಭರವಸೆ ನೀಡಿದರು.ಇದನ್ನೂ ಓದಿ: ಟ್ರಂಪ್ಗೆ ಚಿನ್ನದ ಪಿಚ್ವಾಯಿ ವರ್ಣಚಿತ್ರ ಉಡುಗೊರೆಯಾಗಿ ನೀಡಿದ ಮೋದಿ
