ವಿಜಯಪುರ: ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಧಿಸಿದಂತೆ ರಾಜ್ಯ ರಾಜಕೀಯ ನಾಯಕರುಗಳ ಸಮರ ಮುಂದುವರಿದಿದ್ದು, ಟಿಪ್ಪು ಸುಲ್ತಾನನ್ನು ವೈಭವೀಕರಿಸಿದವರು ಸಾವರ್ಕರ್ ಅವರನ್ನು ಹಿಂದೂ ಎಂದು ಹೇಳುತ್ತಿರುವುದು ಅಚ್ಚರಿಸಿ ಮೂಡಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ನಗರದ ಹೊರ ಭಾಗದಲ್ಲಿರುವ ಜಯ ಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಮಠದ ಆವರಣದಲ್ಲಿರುವ ದ್ವಾದಶ ಲಿಂಗಗಳಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಠದ ಪೀಠಾಧೀಪತಿ ಶ್ರೀ ಜಯಶಾಂತಲಿಂಗೇಶ್ವರ ಸ್ವಾಮೀಜಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.
Advertisement
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವೀರಸಾವರ್ಕರ್ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ವೀರ್ ಸಾವರ್ಕರ್, ಸಿದ್ದಗಂಗಾ ಶ್ರೀ ವ್ಯಕ್ತಿತ್ವ ತುಲನೆ ಸರಿಯಲ್ಲ. ಇಬ್ಬರಿಗೂ ಭಾರತ ರತ್ನ ನೀಡುವುದರಿಂದ ಪ್ರಶಸ್ತಿಯ ಬೆಲೆ ಹೆಚ್ಚಲಿದೆ ಎಂದರು. ಇದನ್ನೂ ಓದಿ: ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದ್ದಾರೆ ಅರ್ಥವಾಗಿಲ್ಲ- ಸಿದ್ದರಾಮಯ್ಯ
Advertisement
ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಲಿ. ಕರಿ ನೀರಿನ ಶಿಕ್ಷೆಯನ್ನ ಹೇಗೆ ಕೊಟ್ಟಿದ್ದರು ಅನ್ನೋದನ್ನ ನೋಡಲಿ. ಆಗ ಸತ್ಯ ಗೊತ್ತಾಗುತ್ತದೆ. ಟಿಪ್ಪು ವೈಭವೀಕರಿಸಿದವರಿಗೆ ಸಾವರ್ಕರ್ ಹಿಂದೂ ಅಂತಿರೋದು ಅಚ್ಚರಿ ಮೂಡಿಸಿದೆ. ಟಿಪ್ಪು ವೈಭವೀಕರಿಸುವಾಗ ಸಿದ್ದರಾಮಯ್ಯಗೆ ತತ್ವ ಸಿದ್ಧಾಂತ ಅಡ್ಡಿ ಆಗಲ್ಲ. ಸಿದ್ದರಾಮಯ್ಯ ತನ್ನ ಹೆಸರಲ್ಲಿ ಸಿದ್ದ-ರಾಮ ಇಬ್ಬರು ಇದ್ದಾರೆ ಅಂತ ಡೈಲಾಗ್ ಹೊಡೆಯುತ್ತಾರೆ. ಈಗ ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮಾತಿನ ಹಿಂದೆ ತಂತ್ರಗಾರಿಕೆ ಇದೆ. ಅಂದು ಅಂಬೇಡ್ಕರ್ ಗೆ ಅಪಮಾನ, ಇಂದು ಸಾವರ್ಕರ್ ಗೆ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಅಪಮಾನವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರದಲ್ಲಿ ಮುಂದುವರಿದಿದ್ರೆ ಕೊಲೆಗಡುಕರಿಗೆ ಪ್ರಶಸ್ತಿ ಕೊಡ್ತಿದ್ರು: ಸಿದ್ದುಗೆ ಸಿಟಿ ರವಿ ತಿರುಗೇಟು
Advertisement
Advertisement
ಕಾಂಗ್ರೆಸ್ ನಲ್ಲಿ ಇದ್ದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಅಂತ ಬಿಂಬಿಸಲು ಹೊರಟಿದ್ದಾರೆ. ಹೀಗೆ ಮುಂದೆ ಹೋದ್ರೆ ಸುಭಾಷ್ ಚಂದ್ರ ಭೋಸ್ ರನ್ನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ಹೇಳಿದರೂ ಅಚ್ಚರಿಯಿಲ್ಲ. ಗಾಂಧಿಜೀ, ಚಂದ್ರಶೇಖರ್, ಆಸ್ಪಾಕ್ ಕಲಾಕಾನ್ ಸೇರಿದಂತೆ ಎಲ್ಲಾ ಹೋರಾಟಗಾರರ ಬಗ್ಗೆ ಗೌರವ ಇದೆ. ಒಂದು ಮುಖವನ್ನ ಮಾತ್ರ ಗೌರವಿಸುತ್ತಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಗರಂ ಆದರು. ಇದನ್ನೂ ಓದಿ: ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು