ಬೆಂಗಳೂರು: ಕುಡಿದು ಪಂಚಮಸಾಲಿ ಶ್ರೀ (Panchamsali Shree) ಗಳಿಗೆ ಕರೆ ಮಾಡಿ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್ (CC Patil) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ (BJP) ಯಿಂದ ಸಿಎಂ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕೊಟ್ಟಿದ್ದಕ್ಕೆ ಸಿಎಂ ಹಾಗೂ ಕೆಂದ್ರಕ್ಕೆ ಅಭಿನಂದನೆ ಸಲ್ಲಿಸ್ತೀವಿ. ಮೃತ್ಯುಂಜಯ ಸ್ವಾಮೀಜಿ (Jaya Mrityunjaya swamiji) 750 ಕಿ.ಮೀ ಪಾದಯಾತ್ರೆ ಮಾಡಿದ್ರು. ಹರಿಹರದಿಂದ ವಚನಾನಂದ ಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದರು. ಯಾವುದೇ ರಾಜಕಾರಣಕ್ಕೆ ಮೀಸಲಿರಿಸದೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸೋದಕ್ಕೆ ಹೋರಾಟ ಮಾಡಿದರು. ಸಮಾಜವನ್ನ ಒಗ್ಗೂಡಿಸಿದ ಕೀರ್ತಿ ಮೃತ್ಯುಂಜಯಸ್ವಾಮೀಜಿಗೆ ಸಲ್ಲುತ್ತದೆ ಎಂದರು.
ಎರಡು ವರ್ಷ ಮೂರು ತಿಂಗಳು ಹಗಲು ರಾತ್ರಿ ಹೋರಾಟ ಮಾಡಿದ್ದಾರೆ. ನಮ್ಮಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕಾನೂನು ತಜ್ಞರು ಹಿಂದುಳಿದ ವರ್ಗದ ಸಮಿತಿಯಿಂದ ವರದಿ ಪಡೆದು ಒಕ್ಕಲಿಗ ಸಮುದಾಯಕ್ಕೆ 2 ಸಿ ಪಂಚಮಸಾಲಿಗೆ 2 ಡಿ ಕೊಟ್ಟಿದ್ದಾರೆ. ಈ ಹೋರಾಟವನ್ನ ಮಾಡಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನ ಅಭಿನಂದಿಸುತ್ತೇನೆ. ಕಾಂಗ್ರೆಸ್ ನ ವಿನಯ್ ಕುಲಕರ್ಣಿ, ವಿನಯ್ ಕಾಶಪ್ಪನವರ್ ಸೇರಿದಂತೆ ಹಲವಾರು ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದರು ಎಂದರು.
ನಮಗೆ ರಾಜಕಾರಣ ಬೇಡ, ನಮ್ಮ ಮಕ್ಕಳಿಗೆ ಮೀಸಲಾತಿ ಸಿಕ್ಕಿದ್ರೆ ಸಾಕು ಅಂತ ಕಾಂಗ್ರೆಸ್ ನಾಯಕರು ಹೇಳಿದರು. ಆ ನಂತರ ವಿಜಯಾನಂದ ಕಾಶಪ್ಪ ನವರ್ ಸೇರಿದಂತೆ ಹಲವರ ಭಾವನೆ ಬೇರೆ ಆಗಿತ್ತು. ಮೀಸಲಾತಿ ಕೊಡೋದಕ್ಕೆ ಸಾಧ್ಯವಾಗೋದಿಲ್ಲಾ ಎಂಬ ಭಾವನೆ ಇತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದಿದ್ರೆ ಇದನ್ನೇ ಇಟ್ಟುಕೊಂಡು ಹೋರಾಟ ಮಾಡಬೇಕಂತ ಪ್ಲಾನ್ ಇತ್ತು. ಸುರ್ಜೆವಾಲ, ಡಿಕೆಶಿ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಯಾವ ಕಾಂಗ್ರೆಸ್ ನಾಯಕರು ಜಯಮೃತ್ಯುಂಜಯ ಸ್ವಾಮೀಜಿಗಳನ್ನ ಭೇಟಿ ಮಾಡಿ ಮಾತಾಡಿಸಲಿಲ್ಲ. ಇದು ಕಾಂಗ್ರೆಸ್ ನಾಯಕರ ಧೋರಣೆ ಎಂದು ವಾಗ್ದಾಳಿ ನಡೆಸಿದರು.
ಕಾಶಪ್ಪನವರು ಹಾಗೂ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಹಲವಾರು ಸರ್ಕಾರದ ಗೆಜೆಟ್ ಸುಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದನ್ನ ನಾವು ತೀವ್ರವಾಗಿ ವಿರೋಧ ಮಾಡ್ತೀವಿ. ಕಾಂಗ್ರೆಸ್ ನ ಕೆಲವು ನಾಯಕರು ಮದ್ಯಪಾನ ಮಾಡಿ ಶ್ರೀಗಳಿಗೆ ಕಾಲ್ ಮಾಡ್ತಿದ್ದಾರೆ. ಮಾನಸಿಕ ಹಿಂಸೆ ಕೊಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಸಿ.ಪಾಟೀಲ್ ಆರೋಪ ಮಾಡಿದರು.