ಬೆಂಗಳೂರು: ಹಿಜಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂಗೆ ಹೋಗೋರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾಯರ್‍ಗಳನ್ನ ಇಟ್ಟು ಕೋರ್ಟ್‍ನಲ್ಲಿ ವಾದ ಮಾಡೋ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ಹುಡುಗೀರಿಗೂ ಅ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.
Advertisement
Advertisement
ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸ್ತಾ ಇದ್ದಾರೆ. ಸುಪ್ರೀಂಗೆ ಹೋಗೋರು ಹೋಗಲಿ… ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ
Advertisement
ಕೋರ್ಟ್ ನಲ್ಲಿ ವಾದ ಮಾಡ್ತಿರೋರು ಕಾಂಗ್ರೆಸ್ ನ ಪ್ರಮುಖರು. ಕಪಿಲ್ ಸಿಬಲ್ ಯಾರು? ಕಾಮತ್ ಯಾರು? ಹೆಗ್ಡೆ ಯಾರು? ಇವೆಲ್ಲ ನೋಡಿದರೆ ಅನುಮಾನ ಬರೋದು ಸಹಜ. ಹೀಗಾಗಿ ಇದರ ಹಿಂದೆ ಕಾಂಗ್ರೆಸ್ ಇದೆ ಅಂತ ನನಗೆ ಅನುಮಾನ ಬರುತ್ತಿದೆ ಎಮದು ಹೇಳಿದರು. ಇದನ್ನೂ ಓದಿ: ಹಿಜಬ್- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್ – ಹೈಕೋರ್ಟ್ ಕಲಾಪದ ಪೂರ್ಣ ಪಾಠ ಇಲ್ಲಿದೆ
ಸಿಎಫ್‍ಐ ಸಂಘಟನೆ ಅಜೆಂಡಾ ಈಡೇರಿದ ಹಾಗೆ ಇಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ವಿರೋಧ ಮಾಡುತ್ತಿದ್ದಾರೆ. ಈ ಸಂಘಟನೆಯೇ ಇದರ ಹಿಂದೆ ಇದ್ದು ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಹೇಳಿದರು.