ಈ ವರ್ಷದಿಂದಲೇ ಭಾರತ ಸರ್ಕಾರವು ಅತ್ಯುತ್ತಮ ವೆಬ್ ಸೀರೀಸ್ (Web Series) ತಯಾರಕರಿಗೆ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ್ (Anurag Thakur) ತಿಳಿಸಿದ್ದಾರೆ. ಈ ವರ್ಷದ ನವೆಂಬರ್ 20 ರಿಂದ ನಡೆಯಲಿರುವ ಗೋವಾ ಚಿತ್ರೋತ್ಸವದಲ್ಲಿ (Goa Film Festival) ಪ್ರಶಸ್ತಿ (Award) ಪ್ರದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಸರಣಿಗಳು ನೋಡುಗರನ್ನು ಸೆಳೆಯುತ್ತಿವೆ. ಅವುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ವರ್ಷದಿಂದಲೇ ಪ್ರಶಸ್ತಿ ನೀಡುವುದಾಗಿ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ
ವೆಬ್ ಸರಣಿಯ ಆಯ್ಕೆಯ ಮಾನದಂಡದ ಬಗ್ಗೆಯೂ ಅವರು ಹೇಳಿದ್ದು, ಅತ್ಯುತ್ತಮ ಕಥೆ, ತಾಂತ್ರಿಕ ಶ್ರೀಮಂತಿಕೆ, ಹೇಳುವ ಕ್ರಮ ಹಾಗೂ ಜನರ ಮೇಲೆ ಅದು ನೀಡಿದ ಪರಿಣಾಮ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.
ಈ ಪ್ರಶಸ್ತಿಯು ಓಟಿಟಿ ವೇದಿಕೆಯ ಮೇಲೆ ಬಂಡವಾಳ ಹೂಡುವವರಿಗೆ ಉತ್ತೇಜಿಸುವ ಜೊತೆಗೆ , ಎಲೆಮರೆಯಂತೆ ಕೆಲಸ ಮಾಡುವ ಪ್ರತಿಭೆಗಳನ್ನೂ ಗುರುತಿಸುವಂತಾಗಲಿದೆ ಎನ್ನುವುದು ಸಚಿವರ ಮಾತು.
Web Stories