ಬೆಳಗಾವಿ: ತನ್ನ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರೋ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೆ ತನ್ನ ಹೇಳಿಕೆಯಿಂದಲೇ ಮತ್ತೆ ಸುದ್ದಿಯಾಗಿದ್ದಾರೆ.
ನಗರದಲ್ಲಿ ಮಂಗಳವಾರ ಕೆ.ಎಲ್.ಇ ಜೀರಗಿ ಸಭಾಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಕುರಿತ ರಾಷ್ಟ್ರೀಯ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬುದ್ಧಿಜೀವಿಗಳು ಹಾಗೂ ಸಾಹಿತಿಗಳ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ಸೋ ಕಾಲ್ಡ್ ಬುದ್ಧಿ ಜೀವಿಗಳು ಬರಿದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ, ಅರ್ಥವೂ ಇರೋದಿಲ್ಲಾ, ತಲೆ, ಬುಡವೂ ಇರೋದಿಲ್ಲ. ಅವರಿಗೆ ಯಾವುದು ಇಂದು ಸರ್ಕಾರಿ ಸೈಟ್ ಬೇಕಾಗಿರುತ್ತೆ, ಅದಕ್ಕೆ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ ಅಂತ ಹೇಳಿದ್ದಾರೆ.
Advertisement
Advertisement
ನಾವು ಮಾನವರಾಗಬೇಕು ಎಂದು ಸ್ಪಷ್ಟನೆ ಇಲ್ಲದವರು ಏನಾಗಬೇಕು ಎಂದು ಕೇಳಿದಾಗ ಮಾನವರಾಗಬೇಕು ಅಂತಾರೆ. ಹಾಗಾದ್ರೆ ನಾವು ದನಾನಾ ಎಂದು ಪ್ರಶ್ನಿಸಿದ ಅವರು, ನಾವು ಪ್ರಾಣಿಗಳ ತರಾ ಇದ್ದಿವಾ? ನಾವು ಹುಟ್ಟಿದ್ದೆ ಮಾನವರಾಗಿ. ಇನ್ನು ಆಗಬೇಕಾಗಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನ ಮಾಡಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳು ಹೇಳತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು ಎಂದು ಅವರು ಹೇಳಿದ್ರು.