ಬಳ್ಳಾರಿ: ಭಾರತ್ ಜೋಡೋ ಯಾತ್ರೆ ನೋಡುತ್ತಿದ್ದೇನೆ. ಇದು ಕಾಂಗ್ರೆಸ್‍ನ ಕೊನೆಯ ಪಾದಯಾತ್ರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವ್ಯಂಗ್ಯವಾಡಿದ್ದಾರೆ
Advertisement
ಬಿಜೆಪಿಯ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯನ್ನು ಬಳ್ಳಾರಿಯ ಖಾಸಗಿ ಹೋಟೆಲ್‍ನಲ್ಲಿ ನಡೆಸಲಾಯಿತು. ಈ ವೇಳೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯನ್ನು ಮೆಲುಕು ಹಾಕಿ, ತಮ್ಮನ್ನು ಬಾಹುಬಲಿಯ ಕಟ್ಟಪ್ಪನ ಕಥೆಗೆ ಹೋಲಿಸಿಕೊಂಡಿದ್ದಾರೆ. ನಾನು ಕಟ್ಟಪ್ಪ ಆಗಿದ್ದು ವಿಜಯನಗರ ಜಿಲ್ಲೆ ಸ್ಥಾಪನೆಗಾಗಿ ಎಂದಿದ್ದಾರೆ.
Advertisement
Advertisement
ಇದೇ ವೇಳೆ ಪಿಎಫ್‍ಐ ಬ್ಯಾನ್ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅಲ್ಪ ಸಂಖ್ಯಾತರ ಮನವೊಲಿಕೆಗೆ ಆರ್‌ಎಸ್‍ಎಸ್ ಬ್ಯಾನ್ ಮಾಡಬೇಕು ಅಂತಿದ್ದಾರೆ. ಆರ್‌ಎಸ್‍ಎಸ್ ಮೂಲಕ ಭಾರತೀಯರ ಸಂಸ್ಕೃತಿ, ಸುರಕ್ಷತೆ ಎತ್ತಿ ಹಿಡಿದಿದೆ. ಆರ್‌ಎಸ್‍ಎಸ್‍ನಲ್ಲಿ ಬಾಂಬ್ ಹೇಗೆ ಹಾಕಬೇಕು. ಗನ್ ಹೇಗೆ ಯೂಸ್ ಮಾಡಬೇಕು ಎನ್ನುವುದನ್ನು ಹೇಳಿಕೊಡಲ್ಲ. ಆದರೆ ಪಿಎಫ್‍ಐ ಸಂಘಟನೆ ಆ ಕೆಲಸ ಮಾಡುತ್ತದೆ. ನಾವೂ ಪುರಾತನ ಕಾಲದಿಂದಲೂ ಆಯುಧ ಪೂಜೆ ಮಾಡುತ್ತಾ ಬಂದಿದ್ದೇವೆ, ನಾವೂ ದೇವಸ್ಥಾನದಲ್ಲಿ ಇರುವ ಕತ್ತಿ. ತ್ರಿಶೂಲವನ್ನು ಪೂಜೆ ಮಾಡುತ್ತೇವೆ. ಕಾಂಗ್ರೆಸ್‍ನವರ ಟೀಕೆ ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
Advertisement
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಭಾರತ್ ಚೋಡೋ ಎಲ್ಲಿ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಭಾರತ್ ಜೋಡೋ ಯಾತ್ರೆ ನೋಡುತ್ತಿದ್ದೇನೆ. ಇದು ಕಾಂಗ್ರೆಸ್‍ನ ಕೊನೆಯ ಪಾದಯಾತ್ರೆ, ಕನ್ಯಾಕುಮಾರಿವರೆಗೆ ಪಾದಯಾತ್ರೆ ಅಂತಾರೆ. ಆದರೆ ರಾತ್ರೋ ರಾತ್ರಿ ಬಂದು ಬಿಟ್ಟಿರುತ್ತಾರೆ. ರಾಜ್ಯಕ್ಕೆ ಬೇಗನೆ ಪಾದಯಾತ್ರೆ ಬಂದಿದೆ. ಅವರು ಏನೂ ಓಡಿಕೊಂಡು ಬರುತ್ತಿದ್ದಾರಾ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎಣ್ಣೆ ನಶೆಯಲ್ಲಿ ಕಾರ್ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ