DistrictsKarnatakaKodaguLatestMain Post

ಎಣ್ಣೆ ನಶೆಯಲ್ಲಿ ಕಾರ್‌ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ

ಮಡಿಕೇರಿ: ಎಣ್ಣೆ ನಶೆಯಲ್ಲಿ ಕಾರ್‌ (Car) ಚಾಲಕನೋರ್ವ (Driver) ನಡುರಸ್ತೆಯಲ್ಲೇ ಕಾರ್‌ ನಿಲ್ಲಿಸಿ ನಿದ್ರೆಗೆ (Sleep)  ಜಾರಿದ ಘಟನೆ ಮಡಿಕೇರಿ ನಗರದಲ್ಲಿ ತಡರಾತ್ರಿ ನಡೆದಿದೆ.

ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣ (Bus Stop) ಬಳಿ ಕಳೆದ ರಾತ್ರಿ ಕಾರ್ ಚಾಲಕ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಬಾರ್‌ಗೆ (Bar) ಹೋಗಿ ಕಂಠಪೂರ್ತಿ ಎಣ್ಣೆ ಹೊಡೆದು ನಂತರ ಕಾರಿಗೆ ಹತ್ತಿದ್ದಾನೆ. ಬಳಿಕ ಕಾರ್‌ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಬಂದು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಏಕಾಏಕಿ ನಡುರಸ್ತೆಯಲ್ಲಿ ಕಾರ್ ನಿಂತಿರುವುದನ್ನು ಕಂಡ ಸಾರ್ವಜನಿಕರು ಅತಂಕಕ್ಕೆ ಒಳಗಾಗಿ ಕಾರಿನ ಬಳಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಕಾರಿನಲ್ಲಿ ಮಲಗಿರುವುದು ಕಂಡುಬಂತು. ಇದನ್ನೂ ಓದಿ: ಇನ್ಮುಂದೆ PUC ಪ್ರಮಾಣ ಪತ್ರ ಇದ್ರೆ ಮಾತ್ರ ಪೆಟ್ರೋಲ್, ಡೀಸೆಲ್

ಕಾರ್ ನಡು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮ ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಕೆಎಸ್‍ಆರ್‌ಟಿಸಿ (KSRTC) ಬಸ್ ಸೇರಿದಂತೆ ಅನೇಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಸಂಚಾರಿ ಪೊಲೀಸರು ಕಾರ್ ಚಾಲಕನನ್ನು ನಿದ್ದೆಯಿಂದ ಎಬ್ಬಿಸಲು ಪ್ರಯತ್ನ ಮಾಡಿದ್ರು ಚಾಲಕ ಮಾತ್ರ ಎದ್ದೇಳಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಕಾರನ್ನು ಎಳೆದಾಡಲು ಮುಗಿಬಿದ್ದರು. ನಂತರ ಕಾರ್ ಚಾಲಕ ಎಚ್ಚರಗೊಂಡು ಕಾರನ್ನು ರಸ್ತೆ ಬದಿಗೆ ಹಾಕಿದ್ದಾನೆ. ಇದನ್ನೂ ಓದಿ: ಹಳ್ಳದಲ್ಲಿ ಸಿಲುಕಿದ್ದ ಟ್ರಕ್ ಎಳೆದ ಟ್ರ್ಯಾಕ್ಟರ್‌

ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ರು ಕಾರ್‌ ಚಾಲಕನ ಅವಾಂತರದಿಂದ ಸಾರ್ವಜನಿಕರು ಹಿಡಿಶಾಪ ಹಾಕಿ ರಾತ್ರಿ ಮನೆಗೆ ತೆರಳಿದರು. ಇತ್ತ ಕಾರ್ ಚಾಲಕನ ವಿರುದ್ಧ ಸಂಚಾರಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ (Drink And Drive)  ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button