– ಸುಮಾರು 80 ಸಾವಿರ ಜನಕ್ಕೆ ಕೊರೊನಾ ಲಸಿಕೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿ 71ನೇ ಹುಟ್ಟುಹಬ್ಬದ ಆಚರಣೆ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಹಾಲು ಪಾಯಸ ವಿತರಿಸಲಾಯ್ತು. ಕೊರೊನಾ ಲಸಿಕಾ ಕೇಂದ್ರದಲ್ಲಿ ಐನೂರಕ್ಕೂ ಹೆಚ್ಚು ಮಂದಿಗೆ ಪಾಯಸ ವಿತರಿಸಲಾಯ್ತು.
ಜಿಲ್ಲೆಯಲ್ಲಿ ಇಂದು ಒಂದೇ ದಿನ 80 ಸಾವಿರ ಜನಕ್ಕೆ ಕೊರೊನಾ ಲಸಿಕೆ ವಿತರಣೆ ಕೂಡಾ ನಡೆಯುತ್ತದೆ. ನಗರದ ಕಡಿಯಾಳಿ ಕಮಲಾಬಾಯಿ ಹೈಸ್ಕೂಲಿನಲ್ಲಿ ಲಸಿಕೆಯ ಜೊತೆಗೆ ಹಾಲು ಪಾಯಸವನ್ನು ವಿತರಣೆ ಮಾಡಲಾಯಿತು. ಮೋದಿ ಪ್ರಧಾನ ಮಂತ್ರಿಯಾದ ನಂತರ ಸತತ ಏಳನೇ ವರ್ಷ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ನೇತ್ರತ್ವದಲ್ಲಿ ಸಾರ್ವಜನಿಕರಿಗೆ ಹಾಲು ಪಾಯಸ ವಿತರಿಸಲಾಗುತ್ತಿದೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ
Advertisement
Advertisement
ಮೋದಿ ಹುಟ್ಟು ಹಬ್ಬದಂದು ಲಸಿಕಾ ಬೃಹತ್ ಲಸಿಕಾ ಅಭಿಯಾನ ನಡೆಯುತ್ತಿರುವುದರಿಂದ ಲಸಿಕೆ ಹಾಕಿಸಲು ಬಂದ ಎಲ್ಲರಿಗೂ ಪಾಯಸ ವಿತರಿಸಿದ್ದೇವೆ. ಯು. ಕಮಲಾಬಾಯಿ ಹೈಸ್ಕೂಲಿನ ಲಸಿಕಾ ಕೇಂದ್ರಗಳಲ್ಲಿ ಮಧ್ಯಾಹ್ನ ಸುಮಾರು 500 ಮಂದಿಗೆ ಉಚಿತವಾಗಿ ಪಾಯಸ ವಿತರಿಸಲಾಯಿತು. ಇದನ್ನು ಮುಂದುವರಿಸುತ್ತೇವೆ. ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ಎಲ್ಲರ ಬಾಯಿ ಸಿಹಿ ಮಾಡಬೇಕೆಂಬ ಉದ್ದೇಶದಿಂದ ಪಾಯಸ ಹಂಚಲಾಗಿದೆ ಎಂದು ರಾಘವೇಂದ್ರ ಕಿಣಿ ಹೇಳಿದರು. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್
Advertisement
Advertisement
ಉಡುಪಿ ನಗರದ ಹೋಟೆಲ್ ಶ್ರೀನಿವಾಸ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ಮತ್ತು ಹೋಟೆಲ್ ಗ್ರಾಹಕರಿಗೆ ಪಾಯಸ ವಿತರಿಸಲಾಯಿತು. ಹೋಟೆಲಿನ ಮಾಲೀಕ ನರಸಿಂಹ ಮಾತನಾಡಿ, ಸಾರ್ವಜನಿಕವಾಗಿ ಈ ರಸ್ತೆಯಲ್ಲಿ ಓಡಾಡುವವರು ಕೂಡ ಪಾಯಸ ಕೊಡುತ್ತಿದ್ದೇವೆ ಸುಮಾರು 400 ಜನಕ್ಕೆ ಸಿಹಿ ವಿತರಿಸುತ್ತೇವೆ. ನಮ್ಮ ಹೋಟೆಲಿನಲ್ಲಿ ಪಾಯಸ ಸಿದ್ಧ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬ- ಎಸ್‍ಟಿ ಕುಟುಂಬಗಳಿಗೆ ದಿನಸಿ ವಿತರಿಸಿದ ಶೋಭಾ