ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಆರು ತಾಲೂಕುಗಳ ಪ್ರಾಥಮಿಕ ಶಾಲೆಗಳಿಗೆ ಬಿಸಿಯೂಟದ ಆಹಾರ ಸಾಮಗ್ರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಶಾಲೆಯ ಅರ್ಧ ಮಕ್ಕಳಿಗೆ ಮಾತ್ರ ಊಟ ಸಿಗುತ್ತಿದೆ.
ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳ ಹಲವು ಪ್ರಾಥಾಮಿಕ ಶಾಲೆಗಳಿಗೆ ಈ ವರ್ಷ ಬಿಸಿಯೂಟದ ಅಕ್ಕಿ ಹಾಗು ಬೇಳೆ ಸರಬರಾಜಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಶಾಲೆಯ ಶಿಕ್ಷಕರು ಪಕ್ಕದಲ್ಲಿರುವ ಪ್ರೌಢಶಾಲೆಯಿಂದ ದವಸ ಧಾನ್ಯ ಎರವಲು ಪಡೆದು ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿದ್ದಾರೆ. ನೂರು ಜನ ಮಕ್ಕಳಿದ್ರೆ ಕೇವಲ ಐವತ್ತು ಜನಕ್ಕೆ ಆಗುವಷ್ಟು ಜನರಿಗೆ ಬಿಸಿಯೂಟ ಸಿದ್ಧಪಡಿಸಿ ಅದರಲ್ಲೇ ಎಲ್ಲರಿಗೂ ಊಟ ನೀಡುತ್ತಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.
ಟೆಂಡರ್ ಪ್ರಕ್ರಿಯ ವೇಳೆ ಲೋಕಸಭಾ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಪ್ರಾಥಮಿಕ ಶಾಲೆಗಳು ನೆರೆಯ ಪ್ರೌಢಶಾಲೆಗಳಿಂದ ಸಾಮಗ್ರಿಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೆಲವು ಶಾಲೆಗಳಿಗೆ ಮಾತ್ರ ಈ ತೊಂದರೆಯಾಗಿದ್ದು, ಸರಿಯಾದ ಅಂಕಿ-ಅಂಶಗಳು ನನಗೆ ಗೊತ್ತಿಲ್ಲ. ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಬಿಸಿಯೂಟಕ್ಕೆ ದವಸ ಧಾನ್ಯ ಸರಬರಾಜು ಮಾಡದೇ ಇರೋದೇನು ಅಂತ ದೊಡ್ಡ ಸಮಸ್ಯೆ ಏನಲ್ಲ ಎಂದು ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಥೋನಿ ನುಣುಚಿಕೊಳ್ತಾರೆ
ಒಟ್ಟಾರೆ ಸರ್ಕಾರ, ಬಡ ಮಕ್ಕಳಿಗೆ ಶಾಲೆಯಲ್ಲೇ ಬಿಸಿಯೂಟ ಕೊಡುತ್ತೇವೆ ಎಂದು ಹೇಳಿಕೊಂಡು ಬರುತ್ತದೆ. ಆದರೆ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ .ಹೀಗಾಗಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳೇ ಸರಿಯಾಗಿ ಶಾಲೆಗೆ ತಲುಪುತ್ತಿಲ್ಲ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]