ಧಾರವಾಡ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂತ್ರಿ ಭಗ್ನ ಮಾಡಿದ್ದು ಸರಿಯಲ್ಲ, ರಾಯಣ್ಣ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವರ ಮೂರ್ತಿ ಭಗ್ನಮಾಡುವಂತಹ ಸ್ಥಿತಿ ಬಂದಿದೆ ಎಂದರೆ ಸರ್ಕಾರ ಇದ್ದು ಏನು ಪ್ರಯೋಜನ? ಎಂದು ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಲಿ. ಎಂಇಎಸ್‍ನವರು ಕರ್ನಾಟಕದಲ್ಲಿದ್ದವರು, ಇಲ್ಲಿಯ ನೀರು ಕುಡಿದವರು, ಇದೀಗ ಇಲ್ಲಿ ಇರುವವರಿಗೆ ವಿರೋಧ ಮಾಡುವುದು ಸರಿಯಲ್ಲ. ರಾಯಣ್ಣನ ಮೂರ್ತಿ ಭಗ್ನ ಮಾಡಿದವರು ದೇಶ ದ್ರೋಹಿಗಳು. ರಾಯಣ್ಣನ ಮೂರ್ತಿ ಭಗ್ನ ಮಾಡುವಂತ ಸ್ಥಿತಿ ಬಂದಿದೆ ಎಂದರೆ ಸರ್ಕಾರ ಯಾಕೆ ಇರಬೇಕು ಎಂದು ಸರ್ಕಾರದ ಮೇಲೆ ಹರಿಹಾಯ್ದರು. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಆರಗ ಜ್ಞಾನೇಂದ್ರ
Advertisement
Advertisement
ಎಂಇಎಸ್ ಬ್ಯಾನ್ ಮಾಡಲು ಒತ್ತಾಯ:
ಬೆಳಗಾವಿ ಎಂಇಎಸ್ ಪುಂಡಾಟಿಕೆ ಈಗ ಧಾರವಾಡದಲ್ಲೂ ಕಿಚ್ಚು ಹೆಚ್ಚಸಿದೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿರುವ ಹಿನ್ನೆಲೆ ಧಾರವಾಡದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಸಲಾಯಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಯಣ್ಣ ಮೂರ್ತಿ ಭಗ್ನ ಮಾಡಿದ ಎಂಇಎಸ್ ಪುಂಡರನ್ನು ಗಡಿ ಪಾರಿಗೆ ಆಗ್ರಹಿಸಿದರು. ಎಂಇಎಸ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಎಂಇಎಸ್ ಸಂಘಟನೆ ಬ್ಯಾನ್ ಮಾಡಬೇಕು ಕರ್ನಾಟಕದಲ್ಲೇ ಇದ್ದು, ನಮ್ಮದೇ ಧ್ವಜ ಸುಡುವ ಇವರಿಗೆ ಇದು ಎಚ್ಚರಿಕೆ ಎಂದು ಕುರುಬ ಮುಖಂಡ ಸುರೇಶ್ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
Advertisement