ನವದೆಹಲಿ: ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ (LiveIn RelationShip) ಗೆಳತಿ ಶ್ರದ್ಧಾ ವಾಕರ್‌ನನ್ನು (Shraddha Walker) ಭೀಕರವಾಗಿ ಹತ್ಯೆ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲ (Aaftab Amin Poonawala) ಹತ್ಯೆಗೆ ಸೋಮವಾರ ಯತ್ನಿಸಲಾಗಿದೆ.
ಕತ್ತಿ ಹಿಡಿದುಬಂದ ಗುಂಪೊಂದು ಪೊಲೀಸ್ ವ್ಯಾನ್ (Poliec Van) ಮೇಲೆ ಏಕಾ-ಏಕಿ ದಾಳಿ ಮಾಡಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (Forensic Laboratory) 2ನೇ ಪಾಲಿಗ್ರಾಫ್ ಪರೀಕ್ಷೆ (Polygraph Test) ನಡೆಸಿ ಮರಳಿ ಜೈಲಿಗೆ ಕರೆದೊಯ್ಯುವಾಗ ದಾಳಿ ನಡೆದಿದೆ. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?
Advertisement
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/Bpx4WCvqXs
— ANI (@ANI) November 28, 2022
Advertisement
15 ಜನರ ಗುಂಪು ಕತ್ತಿ ಹಿಡಿದು ಏಕಾ-ಏಕಿ ದಾಳಿ ನಡೆಸಿದೆ. ಅಲ್ಲದೇ ಆ ಗುಂಪು ಅಫ್ತಾಬ್‌ನನ್ನೇ (Aaftab Amin Poonawala) ಹುಡುಕುತ್ತಿತ್ತು. ಅದು ಬಲಪಂಥೀಯರ ಗುಂಪಿನಂತೆ ಕಂಡುಬಂದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಾಗೃತರಾದ ಪೊಲೀಸರು ದಾಳಿಯನ್ನು ಹತ್ತಿಕ್ಕಿ, ಅಫ್ತಾಬ್‌ನನ್ನು ರಕ್ಷಣೆ ಮಾಡಿದ್ದಾರೆ. ದಾಳಿಗೆ ಯತ್ನಿಸಿದ ಕೆಲವರು ಗಾಯಗೊಂಡಿದ್ದಾರೆ.
Advertisement
ಪೀಸ್‌ಪೀಸ್ ಪ್ರೇಮಿ ಪ್ರಕರಣವನ್ನು ದೆಹಲಿ ಪೊಲೀಸರು ವಿಭಿನ್ನ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಕೂತುಹಲಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್
Advertisement
ಶ್ರದ್ಧಾ ಉಂಗುರ – ಗೆಳತಿಗೆ ಉಡುಗೊರೆ:
ನವೆಂಬರ್ 12ರಂದು ಬಂಧನವಾಗಿರುವ ಅಫ್ತಾಬ್, ಶ್ರದ್ಧಾ ಮೃತದೇಹವನ್ನು ಕತ್ತರಿಸಿ ಮಾಡಿ ಮನೆಯಲ್ಲೇ ಇಟ್ಟುಕೊಂಡಿದ್ದರೂ ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಡಾಕ್ಟರ್ (Doctor) ಗೆಳತಿಯೊಂದಿಗೆ ಮನೆಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದ. ಜೊತೆಗೆ ಶ್ರದ್ಧಾಳ ಉಂಗುರವನ್ನೂ ಆಕೆಗೆ ಉಡುಗೊರೆಯಾಗಿ ನೀಡಿದ್ದ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಅಫ್ತಾಬ್ ಶ್ರದ್ಧಾಳನ್ನು ಕೊಂದ ಬಳಿಕವೂ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಗೆಳತಿಯೊಂದಿಗೆ ತನ್ನ ಮನೆಯಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಆಕೆ ಮನೋವೈದ್ಯೆ ಎಂದು ಪೊಲೀಸರು ಗುರುತಿಸಿ, ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಕೊಂದ ಗೆಳತಿಯ ಉಂಗುರವನ್ನು ಡಾಕ್ಟರ್‌ಗೆ ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದುಬಂದಿದೆ.
ಈಗಾಗಲೇ ಶ್ರದ್ಧಾ ವಾಕರ್ ದೇಹದ 20 ಭಾಗಗಳನ್ನು ಸಂಗ್ರಹಿಸಲಾಗಿದೆ. ಅಫ್ತಾಬ್ ಹತ್ಯೆಗೆ ಬಳಸಿದ್ದ 5-6 ಇಂಚಿನ 5 ಚಾಕುಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.