– ಐಪಿಎಲ್‌ಗೆ ಮೂರೇ ದಿನ ಬಾಕಿ; ಸ್ಟೇಡಿಯಂನಲ್ಲಿ ಗಣಹೋಮ
ಬೆಂಗಳೂರು: ಐಪಿಎಲ್ (IPL 2026) ಪಂದ್ಯಕ್ಕೆ ಕೇವಲ ಮೂರೇ ದಿನ ಬಾಕಿಯಿರುವ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಗಣಹೋಮ ನೆರವೇರಿಸಲಾಯ್ತು.
ಕಳೆದ ವರ್ಷ ನಡೆದ 11 ಆರ್‌ಸಿಬಿ ಅಭಿಮಾನಿಗಳ (RCB Fans) ದಾರುಣ ಸಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಮುಂದೆ ಇಂತಹ ಯಾವುದೇ ಅವಘಡ ಆಗದೇ ಇರಲಿ ಎಂದು ಮೃತ್ಯುಂಜಯ ಹೋಮ, ಗಣಪತಿ ಹೋಮ, ಲಕ್ಷ್ಮಿ ಹೋಮ ನೆರವೇರಿಸಲಾಯ್ತು. ಪೂಜೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ (Venkatesh Prasad) ಸೇರಿ ಹಲವರು ಭಾಗವಹಿಸಿದ್ರು. ಕ್ರೀಡಾಂಗಣದ ಗೇಟ್‌ಗಳಿಗೆ ಬೂದಗುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಯ್ತು.

ಅಷ್ಟೇ ಅಲ್ಲದೇ ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಕೆಎಸ್‌ಸಿಎ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲೇ ಸ್ಮಾರಕ ನಿರ್ಮಾಣ ಮಾಡಿದೆ. ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ ಎಂದು ಸ್ಮಾರಕದ ಮೇಲೆ ಬರಹ ಬರೆಯಲಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಶೈಕ್ಷಣಿಕ ಅಧಿವೇಶನಕ್ಕೆ ರಾಜ್ಯ ಮುಕ್ತ ವಿವಿ ಸಹಯೋಗಕ್ಕೆ ಸರ್ಕಾರ ತಕರಾರು – ಕಾರ್ಯಕ್ರಮದಿಂದ ವಿವಿ ಹೊರಕ್ಕೆ
ಇನ್ನು 11 ಜನರ ನೆನಪಿಗಾಗಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ಸೀಟುಗಳನ್ನ ಖಾಲಿ ಬಿಡೋದಾಗಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಆ ಸೀಟ್‌ನ ಟಿಕೆಟ್‌ಗಳನ್ನ ಯಾವತ್ತೂ ಮಾರಾಟ ಮಾಡಲ್ಲ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಚಿನ್ನಾಭರಣ ಕಳ್ಳತನ, ಗಾಂಜಾ ಸಾಗಾಟ – ಪ್ರತ್ಯೇಕ ಪ್ರಕರಣಗಳಲ್ಲಿ 69 ಲಕ್ಷ ಮೌಲ್ಯದ ವಸ್ತು ಜಪ್ತಿ, ನಾಲ್ವರು ಅರೆಸ್ಟ್

ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ತೇವೆ
ಇನ್ನೂ ಸ್ಮಾರಕ ಉದ್ಘಾಟನೆ ನೆರವೇರಿಸಿದ ಬಳಿಕ ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ಇದೇ ಸ್ಟೇಡಿಯಂ ಬಳಿ ದುರಂತ ನಡೆದಿತ್ತು. ಇದರಿಂದ ಕೆಎಸ್‌ಸಿಎ ಮತ್ತು ಸರ್ಕಾರ ಟೀಕೆಗೆ ಒಳಗಾಗಿತ್ತು. ಕುನ್ಹಾ ವರದಿ ಪ್ರಕಾರ, ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೆಎಸ್‌ಸಿಎಗೆ ಅಭಿನಂದನೆ ಸಲ್ಲಿಸ್ತಿನಿ. ಸಾವನ್ನಪ್ಪಿದವರಿಗಾಗಿ ವಿಶೇಷ ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಸ್ಮಾರಕವನ್ನ ಕೂಡ ಉದ್ಘಾಟನೆ ಮಾಡಿದ್ದಾರೆ. ಮಾರ್ಚ್ 28 ರಂದು ನಡೆಯುವ ಐಪಿಎಲ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಇಂತಹ ದುರ್ಘಟನೆ ಮರುಕಳಿಸದ ಹಾಗೇ ನಡೆದುಕೊಳ್ತವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೇಡಿ ರೌಡಿಯನ್ನ ಮಂಚಕ್ಕೆ ಕರೆದ ಪೊಲೀಸ್ ಇನ್‌ಸ್ಪೆಕ್ಟರ್ – ಅಶ್ಲೀಲ ಆಡಿಯೊ, ಮೆಸೇಜ್ ಸಮೇತ ಕಮಿಷನರ್‌ಗೆ ದೂರು

