ಬೆಂಗಳೂರು: ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.
ಮಾರ್ಚ್ 26 ರಿಂದ ಆರಂಭವಾಲಿರುವ ಉತ್ಸವಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಭಕ್ತರು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರಿನಿಂದ ಮೇಲುಕೋಟೆಗೆ ಪ್ರಯಾಣಿಸಲು ನಿಗಮದಿಂದ ಎಸಿ ಡಿಲಕ್ಸ್ ವಾಹನ ಸೌಲಭ್ಯದೊಂದಿಗೆ, ಒಂದು ದಿನದ ವ್ಯವಸ್ಥಿತ ಪ್ರವಾಸವನ್ನ ಏರ್ಪಡಿಸಿದೆ.
Advertisement
ಈ ಕುರಿತು ನಿಗಮ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಪ್ರವಾಸ ಕೈಗೊಳ್ಳಲು ಇಚ್ಚಿಸುವವರಿಗೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಪ್ರಧಾನ ಕಚೇರಿ ಯಶವಂತಪುರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಕೌಂಟರ್ ಸಂಪರ್ಕಿಸಲು ಕೋರಿದೆ.
Advertisement
ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ನಿಗಮದ ಏಜೆಂಟ್ ಅವರ ಸಂಪರ್ಕಿಸಿ ಸಹಕಾರ ಪಡೆಯಬಹುದು. ಅಲ್ಲದೇ ನಿಗಮದ ಆನ್ ಲೈನ್ ತಾಣದಲ್ಲೂ ಮುಂಗಡ ಬುಕಿಂಗ್ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದೆ. ಪ್ರತಿ ಪ್ರಯಾಣಿಕರಿಗೆ 765 ರೂ. ದರ ನಿಗದಿ ಪಡಿಸಿದೆ. ಆನ್‍ಲೈನ್ ನಲ್ಲಿ kstdc.co ವೆಬ್‍ಸೈಟಿಗೆ ತೆರಳಿ ಟಿಕೆಟ್ ಬುಕ್ ಮಾಡಬಹುದು.